ಉದಯವಾಹಿನಿ, ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ ಆರಂಭಿಸಿದ ಟ್ರಂಪ್ ಭಾರತದ ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಹಿಂದೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ತೆರಿಗೆ ಸಮರವನ್ನು ಮತ್ತೆ ಟ್ರಂಪ್ ಆರಂಭಿಸಿದ್ದು ಆಗಸ್ಟ್ 1 ರಿಂದ 14 ದೇಶಗಳಿಂದ ಅಮೆರಿಕಕ್ಕೆ ಬರುವ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.ನಾವು ಯುನೈಟೆಡ್ ಕಿಂಗ್‌ಡಮ್, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ ಹೇಳಿದರು.
ತೆರಿಗೆ ವಿಧಿಸಿದ ಬಳಿಕ ಹಲವು ದೇಶಗಳು ತಮ್ಮ ಅಮೆರಿಕದ ಬಳಿ ಮಾತುಕತೆ ನಡೆಸುತ್ತಿವೆ. ಈ 14 ದೇಶಗಳಿಗೆ ಈಗಲೂ ಮಾತನಾಡುವ ಆಯ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ತೆರಿಗೆ ಪೈಕಿ ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಮೇಲೆ ಅತ್ಯಧಿಕ 40% ರಷ್ಟಿದೆ.ಯಾವುದೇ ಕಾರಣಕ್ಕಾಗಿ ನೀವು ನಿಮ್ಮ ಸುಂಕಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ನೀವು ವಿಧಿಸುವ ತೆರಿಗೆಯ ಮೇಲೆ 25% ಏರಿಕೆ ಮಾಡಲಾಗುವುದು ಎಂದು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡಿದ್ದಾರೆ.
