ಉದಯವಾಹಿನಿ, ನವದೆಹಲಿ: ಪಂಜಾಬ್‌ನಾದ್ಯಂತ ಕನಿಷ್ಠ 16 ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿ ಖಲಿಸ್ತಾನಿ ಉಗ್ರ ಹ್ಯಾಪಿ ಪಾಸಿಯಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲು ಪ್ರಕ್ರಿಯೆ ಶುರುವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಶತ ಪ್ರಯತ್ನಗಳು ನಡೆಯುತ್ತಿವೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆಗೆ ಮತ್ತು ಭಯೋತ್ಪಾದಕ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI)ನಲ್ಲಿ ಗುರುತಿಸಿಕೊಂಡಿದ್ದ ಹ್ಯಾಪಿ ಪಾಸಿಯಾ 2016-17ರ ಸಮಯದಲ್ಲಿ ಪಂಜಾಬ್‌ನಾದ್ಯಂತ ನಡೆದ 16 ಬಾಂಬ್‌ ಸ್ಫೋಟಕ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ. ಆ ಸಂದರ್ಭದಲ್ಲಿ ಗುರ್ದಾಸ್‌ಪುರ, ದಿನಾನಗರ ಮತ್ತು ಇತರ ಕಡೆಗಳಲ್ಲಿ ನಡೆದ ಗ್ರೆನೇಡ್ ದಾಳಿಗಳ ರುವಾರಿಯೂ ಈತನಾಗಿದ್ದ. ಈ ದಾಳಿಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟುಮಾಡಿದ್ದವು. ಈತನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ, ಮತ್ತು ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!