ಉದಯವಾಹಿನಿ, ಟನ್‌ನ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಮತ್ತೆ ಉದ್ಯೋಗಕ್ಕೆ ಮರಳಿದ್ದಾರೆ.ರಿಷಿ ಸುನಕ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸುನಕ್ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದೀಗ ಮತ್ತೆ ಉದ್ಯೋಗಕ್ಕೆ ಮರಳಿ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್‌ನ ಹಿರಿಯ ಸಲಹೆಗಾರರಾಗಿದ್ದಾರೆ. ಸ್ವಲ ಸಮಯದ ಹಿಂದೆ ನಾರಾಯಣ ಮೂರ್ತಿ ಅವರು, ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನೆಟ್ಟಿಗರು ಟಾರ್ಗೆಟ್ ಮಾಡಿದ್ದಾರೆ. `ರಿಷಿ ಸುನಕ್ ವಾರಕ್ಕೆ 70 ಗಂಟೆಗಳ ಕೆಲಸದ ಕೋಟಾವನ್ನು ಪೂರ್ಣಗೊಳಿಸಲು ಗೋಲ್ಡ್‌ಮನ್ ಸ್ಯಾಚ್ಸ್ ಸೇರಿದ್ದಾರೆ’ ಅಂತ ಕೆಲವರು ಅಪಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ಮಾವನ ಇಚ್ಛೆಯನ್ನು ಪೂರೈಸಲು ರಿಷಿ ಕೆಲಸಕ್ಕೆ ಸೇರಿದ್ದಾರೆ ಅಂತ ಕಾಲೆಳೆದಿದ್ದಾರೆ.
