ಉದಯವಾಹಿನಿ, ಕೌಲಾಲಂಪುರ್: ಆಶೀರ್ವಾದ ಮಾಡುವ ನೆಪದಲ್ಲಿ ಮಾಡೆಲ್ ಬ್ಲೌಸ್ ಒಳಗೆ ಕೈಹಾಕಿ ಹಿಂದೂ ಅರ್ಚಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಲೇಷ್ಯಾದ ಸೆಪಾಂಗ್‌ನಲ್ಲಿರುವ ಮಾರಿಯಮ್ಮನ್ ದೇವಸ್ಥಾನದಲ್ಲಿ ನಡೆದಿದೆ.
ಈ ಕುರಿತು ಮಾಡೆಲ್ ಲಿಶಲ್ಲಿನಿ ಕನರನ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ವಿವರಿಸಿದ್ದಾರೆ. ನನ್ನ ಅಮ್ಮ ಮಲೇಷ್ಯಾದಲ್ಲಿರಲಿಲ್ಲ, ಭಾರತಕ್ಕೆ ತೆರಳಿದ್ದರು. ಹೀಗಾಗಿ ಜೂ.21ರಂದು ನಾನು ಯಾವಾಗಲೂ ಹೋಗುತ್ತಿದ್ದ ದೇವಸ್ಥಾನವೊಂದಕ್ಕೆ ತೆರಳಿದ್ದೆ. ಭಕ್ತಿ, ದೇವರು ಇದೆಲ್ಲದಕ್ಕೂ ನಾನು ಹೊಸಬಳು. ಆದರೆ ಈ ದೇವಸ್ಥಾನಕ್ಕೆ ತೆರಳಲು ಪ್ರಾರಂಭಿಸಿದಾಗಲಿಂದಲೂ ನನಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದ ಅರ್ಚಕರು ನಿಂತಿದ್ದರು.
ನಾನು ದೇವರಿಗೆ ನಮಸ್ಕರಿಸುತ್ತಿದ್ದೆ. ಆಗ ಆ ಅರ್ಚಕರು ಅಲ್ಲಿಗೆ ಬಂದು ನನ್ನ ಬಳಿ ಪವಿತ್ರ ನೀರಿದೆ, ಜೊತೆಗೆ ಒಂದು ದಾರವಿದೆ, ಅದನ್ನು ನಿನಗೆ ಕೊಡುತ್ತೇನೆ, ಅದು ನಿನಗೆ ಆರ್ಶೀವಾದದ ರೀತಿ ಎಂದು ಹೇಳಿ ಹೋದರು. ನಾನು ದೇವರ ಪಾರ್ಥನೆಯ ಬಳಿಕ ಅರ್ಚಕರ ಬಳಿಗೆ ಹೋದೆ. ಆದರೆ ಆ ದಿನ ಶನಿವಾರವಾಗಿದ್ದರಿಂದ ದೇವಸ್ಥಾನದಲ್ಲಿ ಜನ ಜಾಸ್ತಿಯಿದ್ದರು. ಹೀಗಾಗಿ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸಿದರು.
