ಉದಯವಾಹಿನಿ, ಬೆಂಗಳೂರು: ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (ಎಎಂ/ಎನ್ಎಸ್ ಇಂಡಿಯಾ) ಇಂದು ಕರ್ನಾಟಕದಲ್ಲಿ ತನ್ನ ಪ್ರೀಮಿಯಂ ಬಣ್ಣ-ಲೇಪಿತ ಉಕ್ಕಿನ ಪೋರ್ಟ್‌ಫೋಲಿಯೊ ಆಪ್ಟಿಗಲ್® ನಲ್ಲಿ ಎರಡು ವಿಶ್ವ ದರ್ಜೆಯ, ಉನ್ನತ-ಕಾರ್ಯಕ್ಷಮತೆಯ ಉತ್ಪನ್ನಗಳಾದ ಆಪ್ಟಿಗಲ್® ಪ್ರೈಮ್ ಮತ್ತು ಆಪ್ಟಿಗಲ್® ಪಿನ್ನಾಕಲ್‌ ಗಳು ಮಾರುಕಟ್ಟೆಗೆ ಪ್ರವೇಶಿಸಿವೆ.ಕರ್ನಾಟಕದ ಭೌಗೋಳಿಕತೆ ವಿಶಿಷ್ಟವಾಗಿದೆ. ಮಂಗಳೂರಿನಂತಹ ತೇವಾಂಶ ಹೆಚ್ಚಿರುವ ಕರಾವಳಿ ಪ್ರದೇಶಗಳಿವೆ ಬೆಂಗಳೂರು ಮತ್ತು ಬಳ್ಳಾರಿಯಂತಹ ಕೈಗಾರಿಕಾ ಶಕ್ತಿ ಕೇಂದ್ರಗಳಿವೆ. ಇಲ್ಲಿನ ಹವಾಮಾನ ಗುಣಗಳಿಂದ ಮೂಲಸೌಕರ್ಯಕ್ಕೆ ಬೇಗ ತುಕ್ಕು ಹಿಡಿಯುತ್ತದೆ. ಹಾಗಾಗಿ ಇಲ್ಲಿ ಪರಿಸರದ ಕಾಠಿಣ್ಯವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ C4 ಮಟ್ಟದ ಸುಧಾರಿತ ಉಕ್ಕಿನ ಪರಿಹಾರಗಳಿಗೆ ಬಹಳ ಬೇಡಿಕೆ ಇದೆ. ಕರ್ನಾಟಕ ರಾಜ್ಯ: ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತಿರುವುದರಿಂದ; ದೀರ್ಘಾವಧಿ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಸಾಧಿಸಲು ಬಾಳಿಕೆ ಬರುವ, ತುಕ್ಕು-ನಿರೋಧಕ ನಿರ್ಮಾಣ ಸಾಮಗ್ರಿಗಳ ಬಳಕೆ ಅತ್ಯಗತ್ಯ.
ಇದಕ್ಕೆ ಪರಿಹಾರ ಸೃಷ್ಟಿಸಿರುವ ಎಎಂ/ಎನ್ಎಸ್ ಇಂಡಿಯಾ, ಕರ್ನಾಟಕದಲ್ಲಿ ಆಪ್ಟಿಗಲ್® ಪ್ರೈಮ್ ಮತ್ತು ಪಿನ್ನಾಕಲ್ ಅನ್ನು ಪ್ರಾರಂಭಿಸಿದೆ. ಇದು, ಬಿಲ್ಡರ್‌ಗಳು ಮತ್ತು ಪ್ರಾಜೆಕ್ಟ್ ಮಾಲೀಕರಿಗೆ ಹೊಸ ಪರಿಹಾರಗಳನ್ನು ನೀಡುತ್ತದೆ. ಜೊತೆಗೆ, ಕಂಪನಿಯು ಹಿಂದೆ ದೇಶೀಯ ತಯಾರಕರು ತಯಾರಿಸದಿದ್ದ ವಿಶೇಷ ಉಕ್ಕಿನ ಅನ್ವಯಿಕೆಗಳ ಹೊಸ ವಿಭಾಗವನ್ನು ಪ್ರವರ್ತಿಸುತ್ತಿದೆ. ಈ ಉನ್ನತ ಕಾರ್ಯಕ್ಷಮತೆಯ ವಿಭಾಗದಲ್ಲಿ ಭಾರತ ಏಕೈಕ ಉತ್ಪಾದಕ ಎಂಬುದು ಹೆಮ್ಮೆಯ ಸಂಗತಿ.

Leave a Reply

Your email address will not be published. Required fields are marked *

error: Content is protected !!