ಉದಯವಾಹಿನಿ, ನಾರಾಯಣಪುರ : ಒಟ್ಟು ₹1.18 ಕೋಟಿ ಇನಾಮು ಘೋಷಣೆಯಾಗಿದ್ದ ಮೂರು ದಂಪತಿಗಳು ಸೇರಿದಂತೆ 23 ನಕ್ಸಲರು ಛತ್ತೀಸಗಢದ ಸುಕ್ಕಾ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಪೈಕಿ ಒಂಬತ್ತು ಮಹಿಳೆಯರಿದ್ದಾರೆ. ಶರಣಾದ ನಕ್ಸಲರಲ್ಲಿ ಕೆಲವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಗೆ (ಪಿಎಲ್‌ಜಿಎ)ಸೇರಿದ್ದವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುರುಳಿಲ್ಲದ ಮಾವೋವಾದಿ ಸಿದ್ದಾಂತ ಮತ್ತು ನಿಷೇಧಿತ ಸಂಘಟನೆಗಳಲ್ಲಿ ಬೆಳೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಿರಾಶೆಗೊಂಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಸುಕ್ಕಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಹೇಳಿದ್ದಾರೆ.
ಲೋಕೇಶ್ ಅಲಿಯಾಸ್ ಪೊಡಿಯಂ ಭೀಮಾ (35), ರಮೇಶ್ ಅಲಿಯಾಸ್ ಕಲ್ಮು ಕೇಸ (. 23), ಕವಾಸಿ ಮಾಸ (35), ಮಡ್ಕಮ್ ಹಂಗಾ ( 23 ), ನುಪ್ಪೋ ಗಂಗಿ (28), ಪುಣೆಂ ದೇವೆ (30), ಪರಸ್ಕಿ ಪಾಂಡೆ (22), ಮದ್ವಿ ಜೋಗ (20), ನುಪ್ಪೋ ಲಚ್ಚು (22) ಮತ್ತು ನುಪ್ಪೆ ಲಚ್ಚು (25) ಸೇರಿದಂತೆ ನುಪ್ಪೆ ಲಚ್ಚುಗೆ (25) ತಲಾ ₹8 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು. ಇತರ ನಾಲ್ಕು ಕೇಡರ್‌ಗಳಿಗೆ ತಲಾ ₹5 ಲಕ್ಷ, ಒಂದು ಕೇಡರ್‌ಗೆ ₹3 ಲಕ್ಷ ಮತ್ತು ಏಳು ಕೇಡರ್‌ಗಳಿಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಚವಾಣ್ ಮಾಹಿತಿ ನೀಡಿದ್ದಾರೆ.
ಶರಣಾದ ಕೆಲವು ನಕ್ಸಲರು ಮಾವೋವಾದಿಗಳ ಆಮ್ಮೆ, ಜಾಗರಗುಂಡ ಮತ್ತು ಕೇರ್ಲಪಾಲ್ ಪ್ರದೇಶ ಸಮಿತಿಗಳಲ್ಲಿ ಸಕ್ರಿಯರಾಗಿದ್ದರು.
ಶರಣಾದ ಎಲ್ಲಾ ನಕ್ಸಲರಿಗೆ ತಲಾ ₹50,000 ಸಹಾಯಧನ ನೀಡಲಾಗಿದ್ದು, ಸರ್ಕಾರದ ಯೋಜನೆಗಳ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.ಒಟ್ಟು ₹37.5 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ನಕ್ಸಲರು ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರಿಗೆ ಶರಣಾಗಿದ್ದರು.
