ಉದಯವಾಹಿನಿ, ನವದೆಹಲಿ: ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ೨೭೦ ಮಂದಿಯ ಸಾವಿಗೆ ಕಾರಣವಾಗಿರುವ ರಹಸ್ಯ ಬಯಲಾಗಿದೆ. ತಡರಾತ್ರಿ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ವಿಮಾನದ ಇಂಜಿನ್‌ಗಳಿಗೆ ಇಂಧನ ಪೂರೈಕೆಯಾಗದೆ ಸ್ಥಗಿತಗೊಂಡಿದ್ದೇ ಪತನಕ್ಕೆ ಕಾರಣ ಎಂದು ವರದಿಯಿಂದ ಸ್ಪಷ್ಟವಾಗಿದೆ.ಈ ಮೊದಲು ದುರಂತ ಸಂಭವಿಸಿದ ದಿನದಂದು ವಿಮಾನದ ರೆಕ್ಕೆಗೆ ಹಕ್ಕಿ ಬಡಿದು ಪತನವಾಗಿತ್ತು ಎಂದು ಹೇಳಲಾಗಿತ್ತು. ಆದರೆ, ವಿಮಾನ ಅಪಘಾತ ತನಿಖಾ ಸಂಸ್ಥೆ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ವಿಮಾನದ ರೆಕ್ಕೆಗೆ ಪಕ್ಷಿ ಬಡಿದಿಲ್ಲ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ವಿಮಾನ ಟೇಕಾಫ್ ಆಗುವ ವೇಳೆ ಸಹ ಪೈಲಟ್ ವಿಮಾನ ಚಲಾಯಿಸುತ್ತಿದ್ದರು. ಕ್ಯಾಪ್ಟನ್ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಎರಡೂ ಇಂಜಿನ್‌ಗಳಿಗೆ ಇಂಧನ ಪೂರೈಕೆಯಾಗುವುದು ಸ್ಥಗಿತವಾಗಿದೆ.ಪತನವಾಗುವ ಕೆಲವೇ ಸೆಕೆಂಡುಗಳ ಮೊದಲು ’ಮೇ ಡೇ’ ಎಂದು ಕೂಗಿದ್ದಾರೆ.ಈ ವೇಳೆ ಪೈಲಟ್‌ಗಳ ನಡುವಿನ ಸಂಭಾಷಣೆಯೂ ದಾಖಲಾಗಿದ್ದು, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ’ಏಕೆ ಕಟ್ ಆಪ್ ಮಾಡಿದ್ದೀರಿ” ಎಂದು ಕೇಳಿದ್ದಾರೆ. ಆಗ ಇನ್ನೊಬ್ಬ ಪೈಲಟ್ ನಾನು ಹಾಗೆ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.ಅಹಮದಾಬಾದ್‌ನಲ್ಲಿ ಸಂಭವಿಸಿದ ಡ್ರೀಮ್ ಲೈನರ್ ವಿಮಾನದಲ್ಲಿ ಏನೆಲ್ಲ ಸಮಸ್ಯೆಗಳಿದ್ದವು ಎಂಬುದನ್ನು ತನಿಖಾ ಸಂಸ್ಥೆ ೧೫ ಪುಟಗಳ ವರದಿಯಲ್ಲಿ ಬಹಿರಂಗಪಡಿಸಿದೆ.
ಪೈಲ್‌ಗಳ ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ ಡೇಟಾವನ್ನು ಉಲ್ಲೇಖಿಸಲಾಗಿದೆ.ವಿಮಾನವು ವಾಯು ಪ್ರದೇಶಕ್ಕೆ ತಲುಪಿದ ಕೆಲ ಸೆಕೆಂಡುಗಳಲ್ಲಿ ಇಂಜಿನ್ ಸ್ಥಗಿತಗೊಂಡಿರುವುದು ದೃಢಪಟ್ಟಿದೆ.
