ಉದಯವಾಹಿನಿ, ನವದೆಹಲಿ: ಮಳೆಯ ದಿನಗಳಲ್ಲಿ ಸಂಜೆಯ ಹೊತ್ತು ಏನಾದರೂ ಬಿಸಿಯಾಗಿ, ಖಾರವಾಗಿ ಮೆಲ್ಲಬೇಕೆಂಬ ಬಯಕೆ ತಲೆ ಯೆತ್ತುವುದು ಸಹಜ. ಅದಕ್ಕಾಗಿ ನಮ್ಮಿಷ್ಟದ ಯಾವುದೋ ರೆಸ್ಟೋ ರೆಂಟ್‌ಗೆ ಹೋಗಿ ಬಜ್ಜಿ, ಬೋಂಡಾ ಅಥವಾ ಚಾಟ್‌ಗಳನ್ನು ಸವಿಯುತ್ತೇವೆ. ಈವರೆಗೆ ಎಲ್ಲವೂ ಸರಿಯಿತ್ತು. ಆದರೆ ಮನೆಗೆ ಮರಳಿ ಸ್ವಲ್ಪ ಹೊತ್ತಿಗೇ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ರಾತ್ರಿ ಹೊಟ್ಟೆಯೆಲ್ಲ ತಿರುಗಿದಂತಾಗಿ ವಾಂತಿ, ಬೆಳಗಿನ ಹೊತ್ತಿಗೆ ಡಯರಿಯಾ ಸಹ ಆರಂಭ ವಾಗು ತ್ತದೆ. ವೈದ್ಯರಲ್ಲಿಗೆ ಓಡಿದರೆ, ಇದು ವಿಷಾಹಾರದ ಅಥವಾ ಫುಡ್‌ ಪಾಯ್ಸನ್ ಆದ ಲಕ್ಷಣ ಎನ್ನುತ್ತಾರೆ; ಚಿಕಿತ್ಸೆಯನ್ನೂ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಚೇತರಿಕೆ ಹೇಗೆ?
ಮಳೆಗಾಲದಲ್ಲಿ ಆಹಾರ ಅಥವಾ ನೀರು ಕಲುಷಿತಗೊಳ್ಳುವ ಸಂದರ್ಭ ಹೆಚ್ಚು. ಇದರಿಂದಾಗಿ ಕೇವಲ ವಿಷಾಹಾರ ಮಾತ್ರವಲ್ಲ, ಕಾಲರಾ, ಆಮಶಂಕೆ, ಟೈಫಾಯ್ಡ್‌, ವೈರಲ್‌ ಹೆಪಟೈಟಿಸ್‌ ಮುಂತಾದ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಇಂಥ ಪ್ರತಿಯೊಂದು ರೋಗ ಕ್ಕೂ ಬೇರೆಯದೇ ಚಿಕಿತ್ಸೆ ಬೇಕಾ ಗುತ್ತದೆ ಮತ್ತು ಅದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಸಾಮಾನ್ಯ ವಿಷಾಹಾರದ ತೊಂದರೆಯಿಂದ, ವಾಂತಿ- ಡಯರಿಯಾದಂಥ ಅವಸ್ಥೆಯಿಂದ ಚೇತರಿಸಿಕೊಳ್ಳು ವಾಗ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೆಲವು ಪಥ್ಯಗಳೂ ಅಗತ್ಯವಾಗುತ್ತವೆ.

Leave a Reply

Your email address will not be published. Required fields are marked *

error: Content is protected !!