ಉದಯವಾಹಿನಿ, ಕೋವಿಡ್ ಸಮಯದಲ್ಲಿ 2 ಲಕ್ಷ ರೂ. ಕೊಟ್ಟು ಯಾರಿಗಾದರೂ ಸಹಾಯ ಮಾಡು, ಕಲಾವಿದರಿಗೆ ಒಳ್ಳೆಯದಾಗಬೇಕು ಅಂದಿದ್ದರು, ಆದ್ರೆ ಈವರೆಗೂ ಆ ಹಣದ ಬಗ್ಗೆ ಕೇಳಿರಲಿಲ್ಲ ಎಂದು ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ಹೇಳಿದರು.ನಟಿ ಬಿ.ಸರೋಜಾದೇವಿಯವರ ಸಿನಿ ಪಯಣ ಹಾಗೂ ಸಹಾಯ ಮನೋಭಾವದ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ನನಗೆ ಕರೆ ಮಾಡಿ 2 ಲಕ್ಷ ರೂ. ಕೊಟ್ಟು ಯಾರಿಗಾದರೂ ಸಹಾಯ ಮಾಡು, ಕಲಾವಿದರಿಗೆ ಒಳ್ಳೆಯದಾಗಬೇಕು ಎಂದು ಹೇಳಿದ್ದರು. ಬಳಿಕ ನಾನು ಅದನ್ನು ಉಪೇಂದ್ರ ಅವರ ಟ್ರಸ್ಟ್ಗೆ ಕಳುಹಿಸಿದೆ. ಆದರೆ ಈವರೆಗೂ ಸರೋಜಾದೇವಿಯವರು ನನಗೆ ಆ ಹಣವನ್ನು ಯಾರಿಗೆ ಕೊಟ್ಟೆ ಎಂದು ಕೇಳಲಿಲ್ಲ ಎಂದರು.
ಸರೋಜಾದೇವಿ ಅಂತಹವರು ಸಿಗೋದು ತುಂಬಾ ವಿರಳ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು, ನಾಲ್ಕು ಭಾಷೆಗಳಲ್ಲಿ ಬೇರೆ ಬೇರೆ ನಾಯಕ ನಟರೊಂದಿಗೆ ನಟಿಸಿದವರು, ದೊಡ್ಡ ಮಟ್ಟದ ಪ್ರಶಸ್ತಿಗಳನ್ನು ಪಡೆದವರು. ಆದರೂ ಕೂಡ ಸಾಮಾನ್ಯರಂತೆ ಇರುವವರು ತುಂಬಾ ಕಡಿಮೆ. ನಮಗೆ ಸ್ವಲ್ಪ ಏನಾದರೂ ಸಿಕ್ಕರೆ ಅಹಂ ಬರುತ್ತದೆ. ಆದರೆ ಸರೋಜಾದೇವಿಯವರು ಯಾವತ್ತೂ ಹಾಗಿರಲಿಲ್ಲ. ಇನ್ನೂ ಸೂಪರ್ ಸ್ಟಾರ್‌ಗಳು ಇವರ ಜೊತೆ ನಟಿಸಬೇಕೆಂದು ಕಾಯುತ್ತಿದ್ದರು. ಸರೋಜಾದೇವಿಯವರು ನಟಿಸ್ತಾರೆ ಎಂದರೆ ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್ ಎಲ್ಲರೂ ಮೊದಲು ಮೇಡಂ ಬಳಿ ಡೇಟ್ಸ್ ತಗೊಳ್ಳಿ, ಬಳಿಕ ನಾವು ಆ್ಯಕ್ಟ್ ಮಾಡ್ತೀವಿ ಎಂದು ಹೇಳುತ್ತಿದ್ದರು. ಅಂತಹ ಗತ್ತನ್ನು ಇಟ್ಟುಕೊಂಡು ಜೀವನ ನಡೆಸಿದವರು ಎಂದು ತಿಳಿಸಿದರು.
