ಉದಯವಾಹಿನಿ, ಪ್ರತಿಯೊಬ್ಬರೂ ವಾತಾವರಣ ತಂಪಾಗಿರುವಂತಹ ಸಮಯದಲ್ಲಿ ಬಿಸಿಬಿಸಿಯಾದ ಮಿರ್ಚಿ ಬಜ್ಜಿಗಳನ್ನು ಸೇವಿಸಲು ಬಯಸುತ್ತಾರೆ. ಕೆಲವರು ತಮ್ಮ ಮನೆಯಲ್ಲೇ ಮಿರ್ಚಿ ಬಜ್ಜಿಯನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಾರೆ. ಆದ್ರೆ, ಮಿರ್ಚಿಗಳು ಅಷ್ಟೊಂದು ಪರ್ಫೆಕ್ಟ್ ಆಗಿ ಬರುವುದಿಲ್ಲ. ಇದಕ್ಕಾಗಿ ಅವರು ಮಿರ್ಚಿ ಬಜ್ಜಿ ಸಹವಾಸಕ್ಕೆ ಹೋಗುವುದಿಲ್ಲ.ಹೀಗಾಗಿಯೇ ಹೋಟೆಲ್ಗಳಿಂದ ಪಾರ್ಸೆಲ್ ತಂದು ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಮಿರ್ಚಿ ಬಜ್ಜಿಯ ಬದಲಿಗೆ ಈರುಳ್ಳಿ ಬಜ್ಜಿ ತಯಾರಿಸಿ ತಿನ್ನುತ್ತಾರೆ. ನಾವು ತಿಳಿಸಿದ ಪ್ರಕಾರ ಮಿರ್ಚಿ ಬಜ್ಜಿಯನ್ನು ತಯಾರಿಸಿದರೆ ಪರಿಪೂರ್ಣವಾಗಿ ಸಿದ್ಧವಾಗುತ್ತವೆ. ಇದೀಗ ಹೋಟೆಲ್ ಸ್ಟೈಲ್ನ ಮಿರ್ಚಿ ಬಜ್ಜಿಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಹೋಟೆಲ್ ಸ್ಟೈಲ್ನ ಮಿರ್ಚಿ ಬಜ್ಜಿಗಾಗಿ ಬೇಕಾಗುವ ಸಾಮಗ್ರಿಗಳೇನು…?
ಬಜ್ಜಿ ಮೆಣಸಿನಕಾಯಿಗಳು – 15
ಕಡಲೆ ಹಿಟ್ಟು – 1 ಕಪ್ (250 ಗ್ರಾಂ)
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 1 ಟೀಸ್ಪೂನ್
ಅರಿಶಿನ – ಚಿಟಿಕೆ
ಅಜವಾನ – 1 ಟೀಸ್ಪೂನ್
ಅಡುಗೆ ಸೋಡಾ – ಚಿಟಿಕೆ
1 ಟೀಸ್ಪೂನ್ – ಜೋಳದ ಹಿಟ್ಟು
ಸಣ್ಣ ನಿಂಬೆ ಗಾತ್ರ – ಹುಣಸೆಹಣ್ಣು
ಉಪ್ಪು – ರುಚಿಗೆ ತಕ್ಕಷ್ಟು
1 ಟೀಸ್ಪೂನ್ – ಜೀರಿಗೆ
1 ಟೀಸ್ಪೂನ್ – ಬಡೆಸೋಂಪು
