ಉದಯವಾಹಿನಿ, ಘಮಘಮಿಸುವ ಮಸಾಲೆಯುಕ್ತ ‘ಬಿರಿಯಾನಿ’ ಹೆಸರು ಕೇಳಿದ ತಕ್ಷಣವೇ ಬಹುತೇಕ ಜನರ ಬಾಯಿಯಲ್ಲಿ ನೀರೂರಿಸುತ್ತದೆ. ಬಿರಿಯಾನಿಯನ್ನು ಮನೆಯಲ್ಲಿ ಮಾಡಲಿ ಅಥವಾ ಹೋಟೆಲ್ನಲ್ಲಿ ಸಿದ್ಧಪಡಿಸಿರಲಿ, ಬಿರಿಯಾನಿ ಪ್ರಿಯರು ಮಾತ್ರ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇದೀಗ ನಾವು ನಿಮಗಾಗಿ ರೆಸ್ಟೋರೆಂಟ್ ಸ್ಟೈಲ್ನ ಎಗ್ ದಮ್ ಬಿರಿಯಾನಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ನಾವು ನಿಮಗೆ ನೀಡಿರುವ ಟಿಪ್ಸ್ ಪ್ರಕಾರ ಎಗ್ ದಮ್ ಬಿರಿಯಾನಿ ಸಿದ್ಧಪಡಿಸಿದರೆ, ನಿಮಗೆ ಹೆಚ್ಚುವರಿ ಗ್ರೇವಿ ತಯಾರಿಸುವ ಅಗತ್ಯವಿಲ್ಲ. ಹೌದು, ಈ ಬಿರಿಯಾನಿ ತುಂಬಾ ಮಸಾಲೆಯುಕ್ತ ಹಾಗೂ ರುಚಿಕರವಾಗಿರುತ್ತದೆ. ಒಮ್ಮೆ ಈ ಎಗ್ ಬಿರಿಯಾನಿ ಸವಿಸಿದರೆ ಪದೇ ಪದೆ ಸೇವಿಸಬೇಕು ಎನ್ನುವ ರುಚಿ ನಿಮಗೆ ದೊರೆಯುತ್ತದೆ.
ಎಗ್ ದಮ್ ಬಿರಿಯಾನಿ ಸಿದ್ಧಪಡಿಸುವ ವಿಧಾನ: ಎಗ್ ದಮ್ ಬಿರಿಯಾನಿ ತಯಾರಿಸಲು ಮೊದಲು, ಒಂದು ಪಾತ್ರೆಯಲ್ಲಿ ಅರ್ಧ ಕೆಜಿ ಬಾಸ್ಮತಿ ಅಕ್ಕಿಯನ್ನು ತೆಗೆದುಕೊಂಡು ಎರಡು ಬಾರಿ ತೊಳೆದುಕೊಳ್ಳಿ. ಬಳಿಕ ಸಾಕಷ್ಟು ನೀರು ಸುರಿಯಿರಿ ಹಾಗೂ 30 ನಿಮಿಷಗಳವರೆಗೆ ನೆನೆಸಿ ಇಡಿ.
ಬೇಯಿಸಿದ ಮೊಟ್ಟೆಗಳ ಸಿಪ್ಪೆಯನ್ನು ತೆಗೆದುಕೊಳ್ಳಿ. ಈ ಮೊಟ್ಟೆಗಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಅರಿಶಿನ, ಉಪ್ಪು, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ.
ಕಾಲು ಕಪ್ ಹಾಲಿಗೆ ಸ್ವಲ್ಪ ಕೇಸರಿ ಸೇರಿಸಿ ಮಿಶ್ರಣ ಮಾಡಿ ರೆಡಿ ಮಾಡಿಕೊಂಡು ಪಕ್ಕದಲ್ಲಿ ಇಡಬೇಕಾಗುತ್ತದೆ.
ಅನ್ನ ಮಾಡಲು ಒಲೆ ಆನ್ ಮಾಡಿ, ಅದರ ಮೇಲೆ ಪಾತ್ರೆ ಇಡಿ. ಎರಡೂವರೆ ಲೀಟರ್ ನೀರು ಸುರಿದು ಕುದಿಸಿ. ಬಿರಿಯಾನಿ ಎಲೆಗಳು, ದಾಲ್ಚಿನ್ನಿ ಕಡ್ಡಿ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಶಾಜೀರಾ, ಸ್ವಲ್ಪ ತುಪ್ಪ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
ನೀರು ಕುದಿಯಲು ಆರಂಭವಾಗುತ್ತಿದ್ದಂತೆ, ಅಕ್ಕಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಕೊತ್ತಂಬರಿ, ಪುದೀನಾ ಎಲೆಗಳು ಮತ್ತು ಅರ್ಧ ನಿಂಬೆ ರಸದ ಪುಡಿ ಸೇರಿಸಿ. ಬಾಸ್ಮತಿ ಅಕ್ಕಿ ಶೇಕಡಾ 75ರಷ್ಟು ಬೇಯಿಸಿದ ಬಳಿಕ, ಅಕ್ಕಿ ಬಸಿದು ಒಂದು ತಟ್ಟೆಗೆ ತೆಗೆದುಕೊಳ್ಳಬೇಕಾಗುತ್ತದೆ.
