ಉದಯವಾಹಿನಿ, ಡೈರೆಕ್ಟರ್ ಜೋಗಿ ಪ್ರೇಮ್ ಅವರು ಒಂದು ಪ್ರಶ್ನೆಗೆ ಉತ್ತರ ಕೊಟ್ಟರು. ಆ ಉತ್ತರ ಈಗಾಗಲೇ ಇರೋ ಆ ಎಲ್ಲ ನಿರೀಕ್ಷೆಯನ್ನ ಸುಳ್ಳು ಮಾಡಿದೆ. ಕನ್ನಡದ ಕೆಡಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ಬರು ಇರ್ತಾರೆ ಅನ್ನೋ ಒಂದು ಸುದ್ದಿ ಇತ್ತು. ಇದಕ್ಕೆ ಹಬ್ಬಿರೋ ಸುದ್ದಿಗಳೂ ಪುಷ್ಟಿ ನೀಡಿದ್ದವು. ಹಾಗೆ ಹರಡಿದ ಸುದ್ದಿಗಳಲ್ಲಿ ಮೊದಲ ಶಿವರಾಜ್ ಕುಮಾರ್ ಹೆಸರು ಬಂತು. ಅದು ಹೋಗಿ ಸುದೀಪ್ ಹೆಸರು ಕೇಳಿ ಬಂತು. ಆದರೆ, ಜೋಗಿ ಪ್ರೇಮ್ ಕೊಟ್ಟಿರೋ ಉತ್ತರದಲ್ಲಿ ಈ ಎರಡೂ ಹೆಸರು ಕೇಳಿ ಬರಲಿಲ್ಲ.
ಕೆಡಿ ಚಿತ್ರದಲ್ಲಿ ಸುದೀಪ್; ಪ್ರೇಮ್ ಏನಂದ್ರು…?
ಕೆಡಿ ಸಿನಿಮಾದಲ್ಲಿ ಸುದೀಪ್ ಇರ್ತಾರಾ ಅನ್ನೋ ಪ್ರಶ್ನೆಗೆ ಜೋಗಿ ಪ್ರೇಮ್ ಉತ್ತರ ಕೊಟ್ಟಿದ್ದಾರೆ. ಆ ಪ್ರಶ್ನೆಯನ್ನ ತಳ್ಳಿಯು ಹಾಕಲಿಲ್ಲ. ಏನೂ ಬಚ್ಚಿಡೋ ಕೆಲಸವನ್ನೂ ಮಾಡಲಿಲ್ಲ. ಸುದೀಪ್ ಅವರು ನಮ್ಮ ಚಿತ್ರದಲ್ಲಿ ಇದ್ದರೆ ನಾನು ಹೇಳುತ್ತೇನೆ. ಆ ರೀತಿ ಏನೂ ಇಲ್ಲ. ಅವರು ಒಂದು ವೇಳೆ ನಮ್ಮ ಚಿತ್ರದಲ್ಲಿ ಇದ್ದರೆ, ಪ್ರೆಸ್ ಮೀಟ್ ಅಲ್ಲಿ ಕರೆದುಕೊಂಡು ಬಂದು ಕೂರಿಸುತ್ತೇನೆ ಅಂತ ಹೇಳಿ ಈ ಒಂದು ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!