ಉದಯವಾಹಿನಿ, ರಿಯಲ್ಸ್ಟಾರ್ ಉಪೇಂದ್ರ ಅಭಿನಯಿಸಿದರುವ ತಲೈವಾ ರಜನಿಕಾಂತ್ ಅವರ ಕೂಲಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಚಿತ್ರತಂಡ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡ್ತಾ ಸಿನಿ ಪ್ರೇಕ್ಷಕನ ಕುತೂಹಲವನ್ನು ಹೆಚ್ಚಿಸುತ್ತಲೇ ಬಂದಿದೆ. ಒಂದೊಂದು ಅಪ್ಡೇಟ್ ಕೂಡಾ ನಿಜವಾದ ಸಿನಿ ಪ್ರೇಮಿಯನ್ನು ರಿಲೀಸ್ ಡೇಟ್ಗಾಗಿ ಕಾಯುವಂತೆ ಮಾಡಿದೆ. ಈ ಸಿನಿಮಾದ ನಿರ್ದೇಶಕರ ಸಂಭಾವನೆ ಎಷ್ಟಿದೆ ಗೊತ್ತಾ? ಕೇಳಿದ್ರೆ ತಲೆಗಿರ್ ಎನ್ನುತ್ತೆ.ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ರಜನಿಕಾಂತ್ ನಾಯಕನಾಗಿ ನಟಿಸಿರುವ ಕೂಲಿ, ನಿಸ್ಸಂದೇಹವಾಗಿ ಈ ಸೀಸನ್ನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಈ ಸಿನಿಮಾ ಅಂದ್ರೆ ಅದು ಸ್ಟಾರ್ಗಳ ಸಮ್ಮೇಳನ: ನಾಗಾರ್ಜುನ ಅಕ್ಕಿನೇನಿ, ಅಮೀರ್ ಖಾನ್, ಶೋಬಿನ್ ಶಾಹಿರ್, ಉಪೇಂದ್ರ ನಟಿಸಿರುವ ಈ ಚಿತ್ರವು 350 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಇದೊಂಥರಾ ಸ್ಟಾರ್ ಸಮ್ಮೇಳನದಂತೆಯೇ ಇದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಲೋಕೇಶ್ ಕನಕರಾಜ್ ಕೂಲಿ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?: ದಿ ಹಾಲಿವುಡ್ ರಿಪೋರ್ಟರ್‌ಗೆ ನೀಡಿದ ಸಂದರ್ಶನದಲ್ಲಿ, ಲೋಕೇಶ್ ಕನಕರಾಜ್ ಕೂಲಿ ನಿರ್ದೇಶನಕ್ಕಾಗಿ 50 ಕೋಟಿ ರೂ. ಫೀಸ್ ಪಡೆದಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ.
