ಉದಯವಾಹಿನಿ, ನಟ ಆಮಿರ್ ಖಾನ್ ತಮ್ಮ ಚಿತ್ರಗಳಿಗಾಗಿ ತುಂಬಾ ಶ್ರಮಿಸುತ್ತಾರೆ. ಅವರು ಬಹಳ ಕಡಿಮೆ ಚಿತ್ರಗಳನ್ನು ಮಾಡುತ್ತಾರೆ. ಅದಕ್ಕಾಗಿಯೇ ಅವರನ್ನು ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದು ಕರೆಯಲಾಗುತ್ತದೆ. ಅವರ ಇತ್ತೀಚಿನ ಚಿತ್ರ ‘ಸಿತಾರೆ ಜಮೀನ್ ಪರ್’ ಬಿಡುಗಡೆಯಾಯಿತು. ಈಗ 27 ವರ್ಷಗಳ ನಂತರ, ನಟ ಆಮಿರ್ ಹಾಡಲು ಪ್ರಯತ್ನಿಸುತ್ತಿದ್ದಾರೆ. ಆಮಿರ್ ಹಾಸ್ಯ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದು ಎರಡು ಹಾಡನ್ನು ಹಾಡುತ್ತಿದ್ದಾರೆ.
ಇತ್ತೀಚೆಗೆ ಆಮಿರ್ ಬಾಲಿವುಡ್ ಹಂಗಾಮಾಗೆ ಹೇಳಿದ್ದರ ಪ್ರಕಾರ, ‘ಹೆಸರಿಡದ ಹಾಸ್ಯ ಚಿತ್ರದಲ್ಲಿ ನಟಿಸುವುದರ ಜೊತೆಗೆ ಹಾಡನ್ನು ಹಾಡೋದಾಗಿ ಹೇಳಿದ್ದರು. ಅದಕ್ಕಾಗಿ ಅವರು ಹಾಡುವ ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ತರಬೇತಿಯನ್ನೂ ಪಡೆಯುತ್ತಿದ್ದಾರೆ. ರಾಣಿ ಮುಖರ್ಜಿ ಅವರೊಂದಿಗೆ ‘ಗುಲಾಮ್’ ಚಿತ್ರದಲ್ಲಿ ‘ಆತಿ ಕ್ಯಾ ಖಂಡಾಲಾ..’ ಹಾಡನ್ನು ಹಾಡುವ ಮೂಲಕ ಆಮಿರ್ ಸಂಚಲನ ಮೂಡಿಸಿದ್ದರು. ಈಗ 27 ವರ್ಷಗಳ ನಂತರ, ಆಮಿರ್ ತಮ್ಮ ಗಾಯನ ಕೌಶಲ್ಯವನ್ನು ಮತ್ತೆ ಬಳಸಿಕೊಳ್ಳಲಿದ್ದಾರೆ.

‘ನಾನು ಗುಲಾಮ್‌ ಚಿತ್ರಕ್ಕಾಗಿ ಆತಿ ಕ್ಯಾ ಖಂಡಾಲಾ ಹಾಡನ್ನು ಸರಳ ತಮಾಷೆಯಾಗಿ ಹಾಡಿದ್ದೆ. ಅದೃಷ್ಟವಶಾತ್ ಅದು ಹಿಟ್ ಆಯಿತು. ಈಗ, ಕಳೆದ ಕೆಲವು ವರ್ಷಗಳಿಂದ ನಾನು ವೃತ್ತಿಪರ ಗಾಯಕನಾಗಲು ತರಬೇತಿ ಪಡೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಾವು ಅಂತಹ ಚಿತ್ರಗಳನ್ನು ಮಾಡಲು ಮರೆಯುತ್ತಿದ್ದೇವೆ. ಈ ಚಿತ್ರದಲ್ಲಿ ಖಳನಾಯಕ ಇಲ್ಲ ಅಥವಾ ಅದರಲ್ಲಿ ಯಾರೂ ಸಾಯುವುದಿಲ್ಲ. ಈ ಚಿತ್ರವು ನಿಮಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ’ ಎಂದು ಆಮಿರ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!