ಉದಯವಾಹಿನಿ, ನವದೆಹಲಿ: ಕೃಷ್ಣಾ ನದಿ ಅಂತರ-ರಾಜ್ಯ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಕೇಂದ್ರ ಸರ್ಕಾರ ಜು.31ರ ವರೆಗೆ ಅವಧಿಯನ್ನು ವಿಸ್ತರಿಸಿದೆ. ತನ್ನ ಕೆಲಸವನ್ನು ಪೂರ್ಣಗೊಳಿಸಲು ನ್ಯಾಯಮಂಡಳಿ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆ ಜಲಶಕ್ತಿ ಸಚಿವಾಲಯ ಆದೇಶ ಹೊರಡಿಸಿದೆ.ಜಲಶಕ್ತಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, 1956ರ ಅಂತರ-ರಾಜ್ಯ ನದಿ ನೀರು ವಿವಾದ ಕಾಯ್ದೆಯ ಅಧಿಕಾರಗಳ ಅಡಿಯಲ್ಲಿ ಈ ವಿಸ್ತರಣೆ ಮಾಡಲಾಗಿದೆ. ನ್ಯಾಯಮಂಡಳಿಯ ಅಧಿಕಾರಾವಧಿಯನ್ನು ಈ ಹಿಂದೆ ಮಾರ್ಚ್ 2024ರ ಅಧಿಸೂಚನೆಯ ಮೂಲಕ 2025ರ ಜು.31ರವರೆಗೆ ವಿಸ್ತರಿಸಲಾಗಿತ್ತು.
004ರ ಏಪ್ರಿಲ್‌ನಲ್ಲಿ ರಚನೆಯಾದ ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿವಾದಗಳನ್ನು ನಿರ್ಣಯಿಸಲು ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿತ್ತು. ನ್ಯಾಯಮಂಡಳಿಯು 2010ರ ಡಿಸೆಂಬರ್‌ನಲ್ಲಿ ತನ್ನ ಆರಂಭಿಕ ವರದಿಯನ್ನು ಸಲ್ಲಿಸಿತ್ತು, ಆದರೆ ರಾಜ್ಯಗಳು ಎತ್ತಿದ ಉಲ್ಲೇಖಗಳು ಮತ್ತು ಆಕ್ಷೇಪಣೆಗಳಿಗೆ ಹೆಚ್ಚಿನ ವಿಚಾರಣೆಗಳು ಮತ್ತು ನಿರ್ಧಾರಗಳು ಅಗತ್ಯವಾಗಿದ್ದವು.
