ಉದಯವಾಹಿನಿ, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಡೊಮೆಸ್ಟಿಕ್ ಟೂರ್ನಿ ವಿಜಯ್ ಹಜಾರೆ ನಡೆದಿದೆ.. ಈ ಪಂದ್ಯ ಜನಸಾಗರವೇ ಹರಿದು ಬಂದಿದೆ. ಪೋಲಿಸರು ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದ್ರಲ್ಲಿ ಬೆಸ್ತು ಹೋಗಿದ್ದಾರೆ.ಏನಿದು ಡೊಮೆಸ್ಟಿಕ್ ಪಂದ್ಯನಾ.? ಇಂಟರ್ನ್ಯಾಷನಲ್ ಪಂದ್ಯನಾ ಅನ್ನೋ ಅನುಮಾನ ವ್ಯಕ್ತವಾಗಿದೆ..ಈ ಡೊಮೆಸ್ಟಿಕ್ ಟೂರ್ನಿ ವಿಜಯ್ ಹಜಾರೆಗೆ ಈ ಮಟ್ಟಿಗೆ ಕ್ರೇಜ್ ಬರಲು ಕಾರಣವೇ ಮಿಸ್ಟರ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಗಿದ್ದಾರೆ.
ಮುಂಬೈ ಹಾಗೂ ಸಿಕ್ಕಿಂ ನಡುವಿನ ಮ್ಯಾಚ್ ನಡೆದಿದೆ.. ಈ ಪದ್ಯ ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ.. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬರು “ರೋಹಿತ್ ಜಿ ರೋಹಿತ್ ಜಿ ವಡಾ ಪಾವ್ ತಿನ್ನುತ್ತೀರಾ” ಎಂದು ಭರ್ಜರಿ ಆಫರ್ ಕೊಟ್ಟಿದ್ದಾರೆ..ಅಭಿಮಾನಿಯ ಆಫರ್‌ಗೆ ರೋಹಿತ್ ಶರ್ಮಾ ಕ್ಯೂಟ್ ಆಗಿ ಮುಗುಳು ನಗು ಬೀರಿ ಪ್ರೀತಿಯಿಂದಲೇ ಬೇಡ ನೀವೆ ತಿನ್ನಿ ಎಂದು ಸನ್ನೆ ಮಾಡಿದ್ದಾರೆ..ರೋಹಿತ್ ಶರ್ಮಾ ಅವರ ರಿಯಾಕ್ಷನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಅಭಿಮಾನಿಗಳು ಈ ವೀಡಿಯೊಗೆ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ ಜಯಸಾಧಿಸಿದೆ.. ರೋಹಿತ್ ಶರ್ಮಾ ಅವರು ಸೂಪರ್ ಡೂಪರ್ ಆಗಿ ಬ್ಯಾಟಿಂಗ್ ಮಾಡಿ ಧೂಳೆಬ್ಬಿಸಿದ್ದಾರೆ. ಹಿಟ್‌ಮ್ಯಾನ್ ಅಬ್ಬರಿಸಿ ರೋಹಿತ್ 94 ಎಸೆತಗಳಲ್ಲಿ ಅಜೇಯ 155 ರನ್ ಗಳಿಸಿದರು. ಇದರಲ್ಲಿ ಅವರು 18 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ರೋಹಿತ್ ಶರ್ಮಾ ಅವರು ಸೂಪರ್ ಡೂಪರ್ ಆಟಕ್ಕೆ ಫ್ಯಾನ್ಸ್ ಖುಷ್ ಆಗಿದ್ದಾರೆ..ಮುಂಬೈ ಪರ ರೋಹಿತ್ ಶರ್ಮಾ ಬಲವಾಗಿ ಬ್ಯಾಟಿಂಗ್ ಮಾಡಿ ಸಿಕ್ಕಿಂ ತಂಡವನ್ನ ಹಿಂದಿಕ್ಕಿದ್ದಾರೆ.
