ಉದಯವಾಹಿನಿ, ಇಂಡಿಯನ್‌ ಪ್ರೀಮಿಯರ್ ಲೀಗ್‌ 2026ರ ಮಿನಿ ಆಕ್ಷನ್‌ ಮುಗಿದರೂ ಫ್ರಾಂಚೈಸಿಗಳಲ್ಲಿ ಪ್ಲೇಯಿಂಗ್‌- 11 ಕುರಿತು ತೆರೆಮರೆಯಲ್ಲಿ ಯೋಜನೆ ರೂಪಿಸುತ್ತಿವೆ. ನಾಯಕತ್ವ, ಓಪನರ್ಸ್‌, ವಿಕೆಟ್‌ ಕೀಪರ್‌, ಬೌಲರ್‌, ಪೇಸ್‌ ಬೌಲರ್‌, ಆಲ್‌ರೌಂಡರ್‌ ಸ್ಥಾನಗಳಿಗೆ ಯಾರ್‌ ಯಾರು ಸೂಕ್ತ ಎಂದು ಚರ್ಚಿಸಲಾಗುತ್ತಿದೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗುತ್ತದೆ ಎನ್ನಲಾಗಿದೆ.
ಐಪಿಎಲ್‌ನ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸದ್ಯ ತಂಡದಲ್ಲಿ ಮೇಜರ್‌ ಸರ್ಜರಿ ಮಾಡಲು ಮುಂದಾಗಿದೆ. ಐಪಿಎಲ್‌ ಸೀಸನ್‌ 19ರಲ್ಲಿ ಹೊಸ ನಾಯಕನನ್ನು ನೇಮಕ ಮಾಡಲು ಯೋಜನೆಗಳನ್ನು ರೂಪಿಸುತ್ತಿದೆ. ಯುವ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಬದಲಿಗೆ ಕ್ಯಾಪ್ಟನ್ಸಿ ಅನ್ನು ಅನುಭವಿ ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ವಹಿಸಲು ಪ್ಲಾನ್‌ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

2025ರ ಐಪಿಎಲ್‌ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೆಲ್ಲಿ ತಂಡ ಕೊನೆ ಕೊನೆಯಲ್ಲಿ ಐದನೇ ಸ್ಥಾನಕ್ಕೆ ಕುಸಿಯಿತು. ಇದಕ್ಕೆ ನಾಯಕ ಅಕ್ಷರ್‌ ಪಟೇಲ್‌ ಅನಾನುಭವವೇ ಕಾರಣವಾಗಿರಬಹುದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಸೀಸನ್‌ ಆರಂಭಕ್ಕೂ ಮುನ್ನ ನಾಯಕತ್ವದ ಬದಲಾವಣೆ ಮಾಡಲು ಡೆಲ್ಲಿ ಕ್ಯಾಪಿಟಲ್‌ ಮುಂದಾಗಿದೆ ಎನ್ನಲಾಗಿದೆ. ಒಂದು ಬಾರಿಯೂ ಟ್ರೋಫಿ ಗೆಲ್ಲದ ಡೆಲ್ಲಿ ಈ ಸಲ ಬಿಗ್‌ ಪ್ಲಾನ್‌ ಮಾಡುತ್ತಿದೆ.

ಕೆ.ಎಲ್‌ ರಾಹುಲ್‌ ಅವರಿಗೂ ಕ್ಯಾಪ್ಟನ್ಸಿ ನೀಡಲು ಅವರ ನಾಯಕತ್ವದ ದಾಖಲೆಗಳು ಮುಖ್ಯ ಕಾರಣ ಎಂದು ಹೇಳಬಹುದು. ಇದುವರೆಗೆ ಪಂಜಾಬ್‌ ಹಾಗೂ ಲಕ್ನೋ ಟೀಮ್‌ನಲ್ಲಿ ಕ್ಯಾಪ್ಟನ್‌ ಆಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 64 ಮ್ಯಾಚ್‌ಗಳಲ್ಲಿ ಕೆ.ಎಲ್‌ ರಾಹುಲ್‌ 32 ಪಂದ್ಯಗಳಲ್ಲಿ ಮ್ಯಾಚ್‌ ಗೆಲ್ಲಿಸಿದರೆ ಇನ್ನುಳಿದ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. ಅಂದರೆ ನಾಯಕತ್ವದಲ್ಲಿ ಒಳ್ಳೆಯ ಅನುಭವ ಹೊಂದಿದ ಕನ್ನಡಿಗ ಸೋಲು-ಗೆಲುವಿನಲ್ಲಿ ಫಿಫ್ಟಿ-ಫಿಫ್ಟಿ ಸಾಧನೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!