ಉದಯವಾಹಿನಿ, ನವದೆಹಲಿ: ಡಿ.26 ರಿಂದ ಭಾರತೀಯ ರೈಲ್ವೆಯು ತನ್ನ ಪ್ರಯಾಣ ದರಗಳಲ್ಲಿ ಬದಲಾವಣೆ ತರುತ್ತಿದೆ. ದೀರ್ಘಶ್ರೇಣಿಯ ಪ್ರಯಾಣ ಆಧರಿಸಿ ಕನಿಷ್ಠ ದರ ಹೆಚ್ಚಿಸುತ್ತಿದೆ. ಆದರೆ ಉಪನಗರ ಮತ್ತು ಕಡಿಮೆ-ದೂರ ಪ್ರಯಾಣ ದರಗಳಲ್ಲಿ ಯಾವುದೇ ವ್ಯತ್ಯಾಸ ಇರೋದಿಲ್ಲ ಎಂದು ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ನಾನ್ ಎಸಿ ಕೋಚ್‌ನಲ್ಲಿ ಪ್ರತಿ 500 ಕಿ.ಮೀಗೆ 10 ರೂ. ಹೆಚ್ಚುವರಿ ಆಗಲಿದೆ. 215 ಕಿಮೀ ವರೆಗಿನ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಳವಾಗಲಿದೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ, ನಾನ್-ಎಸಿ ಮತ್ತು ಎಸಿ ಎರಡರಲ್ಲೂ, ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳವಾಗಲಿದೆ. ಈ ಬದಲಾವಣೆಯಿಂದ ರೈಲ್ವೆಗೆ ಸುಮಾರು 600 ಕೋಟಿ ರೂಪಾಯಿಗಳಷ್ಟು ಆದಾಯ ಬರುವ ನಿರೀಕ್ಷೆಯಿದೆ.

ಯಾವುದಕ್ಕೆ ವಿನಾಯಿತಿ?: ಉಪನಗರ ರೈಲು ಸೇವೆಗಳು ಅಥವಾ ಮಾಸಿಕ ಟಿಕೆಟ್‌ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗ್ತಿದೆ ಇಸ್ರೋ – ಡ್ರೋಗ್ ಪ್ಯಾರಾಚೂಟ್ ಪರೀಕ್ಷೆ ಸಕ್ಸಸ್

600 ಕೋಟಿ ಆದಾಯ ನಿರೀಕ್ಷೆ
ಈ ದರ ಪರಿಷ್ಕರಣೆಯಿಂದ ಸುಮಾರು 600 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ಭಾರತೀಯ ರೈಲ್ವೆ ನಿರೀಕ್ಷಿಸಿದೆ. ಕಾರ್ಯಾಚರಣಾ ವೆಚ್ಚವನ್ನು ನಿರ್ವಹಿಸಲು ಮತ್ತು ಕಡಿಮೆ ದೂರದ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಕೈಗೆಟುಕುವಂತೆ ಇರಿಸಿಕೊಳ್ಳಲು ಈ ದರ ಹೊಂದಾಣಿಕೆ ಮಾಡಲಾಗಿದೆ.

 

 

 

Leave a Reply

Your email address will not be published. Required fields are marked *

error: Content is protected !!