ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥ ಇರುವ ಪುಣ್ಯ ಕ್ಷೇತ್ರ. ಕೆಲವರು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುತ್ತಿರಬಹುದು. ಒಟ್ಟಿನಲ್ಲಿ ಸೌಜನ್ಯ ಪ್ರಕರಣವಿರಲಿ ಬೇರೆ ಅತ್ಯಾಚಾರ, ಹತ್ಯೆ ಪ್ರಕರಣಗಳಿರಲಿ ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿದ್ದಾರೆ. ಅನುಮಾನಾಸ್ಪದ ಸಾವುಗಳ ಬಗ್ಗೆ ಎಸ್ಐಟಿ ತನಿಖೆ ಆಗಬೇಕು ಅಂತ ಒತ್ತಡ ಇತ್ತು. ದಕ್ಷಿಣ ಕನ್ನಡ ಪೊಲೀಸರು ತನಿಕೆಗೆ ಸಿದ್ಧವಿದ್ದರು ಅವರ ಮೇಲೆ ನಮಗೂ ನಂಬಿಕೆ ಇತ್ತು. ಇದೀಗ ಸಿಎಂ ಹಾಗೂ ಗೃಹ ಸಚಿವರು ಎಸ್ಐಟಿ ರಚಿಸಿ ಆದೇಶ ಮಾಡಿದ್ದಾರೆ ನಿಜಾಂಶ ಹೊರಗೆ ಬರಬೇಕು ನೂರಾರು ಹೆಣ ಅಂತ ಹೇಳ್ತಿದ್ದಾರೆ ಇದರ ಸತ್ಯಾಂಶ ಹೊರಗೆ ಬರಬೇಕು ಅಂತ ಒತ್ತಾಯಿಸಿದ್ದಾರೆ.
ಅಲ್ಲದೇ ಸಾಕ್ಷಿದಾರ ಯಾರು? ಅವರ ಹಿನ್ನೆಲೆ ಏನು ಎಂಬುದರ ಹಿಂದೆ ಹೋಗಲು ಆಗುವುದಿಲ್ಲ. ಮೊದಲು ಹೆಣ ಹೂತು ಹಾಕಿದ್ದಾರೆ ಎನ್ನಲಾದ ಸ್ಥಳಕ್ಕೆ ಹೋಗಬೇಕು. ವಿಧಿವಿಜ್ಞಾನ ತನಿಖೆ ಆಗಬೇಕು ಇದೆಲ್ಲವನ್ನೂ ನೋಡಬೇಕು. ಯಾರೋ ಒಬ್ಬರ ಮೇಲೆ ಮಾಡಿದ್ದೀವಿ ಅಂತ ಹೇಳಲು ಆಗುವುದಿಲ್ಲ. ಕೇವಲ ಸೌಜನ್ಯ ಕೇಸ್ ಮಾತ್ರವಲ್ಲ, ಎಲ್ಲವನ್ನೂ ಕೂಲಂಕುಷವಾಗಿ ತನಿಖೆ ಮಾಡಬೇಕು. ಸಾಕ್ಷಿದಾರ ಠಾಣೆಗೆ ಬಂದು ಹೇಳಿಕೆ ಕೊಟ್ಟಾಗಲೇ ತನಿಖೆ ಮುಂದುವರಿಸಬಹುದಿತ್ತು. ಆದ್ರೆ ಎಸ್‌ಐಟಿ ಮಾಡಲೇಬೇಕು ಎನ್ನುವ ಒತ್ತಡವಿತ್ತು. ಅದರಂತೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ ಎಂದು ತಿಳಿಸಿದ್ದಾರೆ.
