ಉದಯವಾಹಿನಿ, ಕಚ್: ಕೆಲವೊಮ್ಮೆ ನಂಬಿದವರೇ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ. ಮಹಿಳಾ ಎಎಸ್‌ಐ ಹಾಗೂ ಸಿಆರ್‌ಪಿಎಫ್ ಯೋಧ ಈ ಇಬ್ಬರೂ ಲಿವಿಂಗ್ ಸಂಬಂಧದಲ್ಲಿದ್ದರು. ಯಾವುದೋ ಕಾರಣಕ್ಕೆ ಕೋಪಗೊಂಡು ಯೋಧ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿ ಕೊನೆಗೆ ಅವರು ನಿಯೋಜನೆಗೊಂಡಿದ್ದ ಪೊಲೀಸ್ ಠಾಣೆಯಲ್ಲೇ ಶರಣಾಗಿರುವ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದೆ. ಆತ ಠಾಣೆಗೆ ಶರಣಾಗುವ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂಜಾರ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ನಿಯೋಜಿತರಾಗಿದ್ದ ಅರುಣಾ ನಟು ಜಾದವ್ ಅವರನ್ನು ಅವರ ಲಿವ್-ಇನ್ ಸಂಗಾತಿ ಮತ್ತು ಸಿಆರ್‌ಪಿಎಫ್ ಜವಾನ ದಿಲೀಪ್ ದಂಗಾಚಿಯಾ ಕೊಲೆ ಮಾಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಈ ಘಟನೆ ಶುಕ್ರವಾರ (ಜುಲೈ 18) ರಾತ್ರಿ ನಡೆದಿದೆ. ತೂಹಲಕಾರಿ ವಿಷಯವೆಂದರೆ ಆರೋಪಿ ಸ್ವತಃ ಮಹಿಳಾ ಅಧಿಕಾರಿಯನ್ನು ನಿಯೋಜಿತಗೊಳಿಸಲಾಗಿದ್ದ ಅದೇ ಪೊಲೀಸ್ ಠಾಣೆಗೆ ಬಂದು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಘಟನೆ ನಡೆದ ರಾತ್ರಿ ಏನಾಯಿತು? ಈ ಘಟನೆ ಶುಕ್ರವಾರ (ಜುಲೈ 18) ರಾತ್ರಿ ಅಂಜಾರ್‌ನಲ್ಲಿರುವ ಅವರ ಮನೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ರಾತ್ರಿ 10 ಗಂಟೆ ಸುಮಾರಿಗೆ ಅರುಣಾ ಮತ್ತು ದಿಲೀಪ್ ನಡುವೆ ಯಾವುದೋ ವಿಷಯಕ್ಕೆ ಜಗಳವಾಯಿತು. ಈ ಜಗಳ ಎಷ್ಟು ಉಲ್ಬಣಗೊಂಡಿತೆಂದರೆ, ದಿಲೀಪ್ ಕೋಪದಿಂದ ಅರುಣಾಳನ್ನು ಕತ್ತು ಹಿಸುಕಿ ಸ್ಥಳದಲ್ಲೇ ಕೊಂದಿದ್ದಾನೆ.
