ಉದಯವಾಹಿನಿ, ನಟಿ ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೆ ಇಟಲಿಯ ಪ್ರಸಿದ್ಧ ಸ್ಥಳಗಳಿಗೆ ತಮ್ಮ ಮಗ ಅರ್ಹಾನ್ ಜೊತೆಗೆ ತೆರಳಿದ್ದಾರೆ. ಇಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊವನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ಮಲೈಕಾ ಅರೋರಾ ರಜಾ ದಿನಗಳನ್ನು ಬಹಳಷ್ಟು ಎಂಜಾಯ್ ಮಾಡಿದ್ದಾರೆ. ನಟಿ ಬಿಕಿನಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ತನ್ನ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ನೆಟ್ಟಿಗರ ಗಮನ ಸೆಳೆದಿದೆ.51 ವರ್ಷವಾದರೂ ಯಂಗ್ ಲೇಡಿಯಂತೆ ಇರುವ ಮಲೈಕಾ ಪಿಂಕ್ ಬಿಕಿನಿಯಲ್ಲಿ ತಮ್ಮ ಫಿಟ್ ಫಿಗರ್‌ನ್ನು ತೋರ್ಪಡಿಸಿದ್ದಾರೆ. ವಿಭಿನ್ನ ಡಿಸೈನ್ ಇರುವ ಬಿಕಿನಿಯಲ್ಲಿ ನಟಿ ಮಲೈಕಾ ಅವರು ಹಾಟ್ ಆಗಿ ಕಂಡಿದ್ದಾರೆ.
ಮಲೈಕಾ ಪಿಂಕ್ ಬಿಕಿನಿಯೊಂದಿಗೆ ಹೊಂದುವ ಸೆರಾಂಗ್ ಧರಿಸಿ ಬೀಚ್ ಲುಕ್‌ಗೆ ಡಿಪ್ರೆಂಟ್ ಆದ ಟಚ್ ನೀಡಿದ್ದಾರೆ. ಇಟಲಿಯ ಪ್ರಸಿದ್ದ ಸ್ಥಳಗಳಲ್ಲಿ ಅವರು ತಮ್ಮ ಮಗ ಅರ್ಹಾನ್ ಜೊತೆ ರಜೆಯನ್ನು ಆನಂದಿಸುತ್ತಿರುವ ದೃಶ್ಯಗಳು ಕಣ್ತುಂಬಿಕೊಳ್ಳುವಂತಿವೆ.
ಮಲೈಕಾ ಹಾಟೆಸ್ಟ್ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ..ಕೂಲಿಂಗ್ ಗ್ಲಾಸ್ ಧರಿಸಿ ನಟಿ ಮಲೈಕಾ ಬೋಲ್ಡ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.. ನೆಟ್ಟಿಗರೊಬ್ಬರು “ಹಾಟ್ ನೆಸ್ ರಿಲೋಡ್” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಮಲೈಕಾ ಹೌಸ್ ಫುಲ್, ದಬಾಂಗ್ 2, ವೆಲ್ಕಂ, ಕಾಂಟೆ, ಇಎಂಐ ಸೇರಿದಂತೆ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಮಾಡೆಲಿಂಗ್ ಕ್ಷೇತ್ರದಿಂದಲೂ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!