ಉದಯವಾಹಿನಿ, ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಜೊತೆಗೆ ವಿದೇಶ ಪ್ರವಾಸಕ್ಕೆ ತೆರಳಿದ್ದು ಅಲ್ಲಿ ಮಸ್ತ್ ಎಂಜಾಯ್ ಮಾಡಿರುವ ಫೋಟೊಗಳು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಶೇರ್ ಮಾಡಿರುವ ಫೋಟೋವೊಂದರಲ್ಲಿ ಡೀಪ್ ನೆಕ್ ಲೈನ್ ಇರುವ ರೆಡ್ ಪ್ರಾಕ್ ನಲ್ಲಿ ಪ್ರಿಯಾಂಕಾ ಬಹಳಷ್ಟು ಸುಂದರವಾಗಿ ಕಂಡಿದ್ದಾರೆ.
ಪ್ರಿಯಾಂಕಾ ಸನ್ ಗ್ಲಾಸ್ ಧರಿಸಿ ತಮ್ಮ ಕೂಲ್ ಲುಕ್‌ನಿಂದ ಗಮನ ಸೆಳೆದಿದ್ದಾರೆ.ಜೀವನಾದ್ಯಂತ ನೆನಪಾಗುವ ಜನ್ಮದಿನ ಪ್ರಯಾಣ ಎಂದು ಶೀರ್ಷಿಕೆ ಬರೆದಿರುವ ಅವರು, ಪತಿ ನಿಕ್ ಜೊನಾಸ್, ಮಗಳು ಮಾಲ್ತಿ ಮೇರಿ ಜೊತೆ ಕಳೆದಿರುವ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ರೆಡ್ ಬಿಕಿನಿ ಧರಿಸಿ ಪ್ರಿಯಾಂಕಾ ಸಮುದ್ರ ತೀರದ ಬಳಿ ಫೋಟೋ ಶೂಟ್ ಮಾಡಿಸಿದ್ದಾರೆ. ನಟಿಯ ಈ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದು ಲೈಕ್ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.ನಟಿ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಾಗೂ ಮಾಲ್ತಿ ಜೊತೆ ಐಲ್ಯಾಂಡ್ ಒಂದಕ್ಕೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಫೋಟೋ ಗಳನ್ನು ಅವರು ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೊದಲ್ಲಿ ನಟಿ ಪ್ರಿಯಾಂಕ ಪತಿ ಹಾಗೂ ಮಗು ಜೊತೆ ಎಂಜಾಯ್ ಮಾಡುತ್ತಿರುವುದು ಕಾಣಬಹುದು.
