ಉದಯವಾಹಿನಿ, ಪಣಜಿ: ಗೋವಾದ ಕಲಂಗುಟ್‍ನ ಪೊಲೀಸ್ ಠಾಣೆಯ ಬಳಿ ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು 10 ದಿನಗಳಲ್ಲಿ ತೆಗೆದುಹಾಕುವಂತೆ ಕಲಂಗುಟ್ ಪಂಚಾಯತ್ ಸಂಬಂಧಿಸಿದ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ ಆದೇಶಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ, ಕಲಂಗುಟ್-ಸಾಳಗಾಂವ್ ರಸ್ತೆಯಲ್ಲಿರುವ ಕಲಂಗುಟ್ ಪೊಲೀಸ್ ಠಾಣೆಯ ಜಂಕ್ಷನ್‍ನಲ್ಲಿ ಶಿವಸ್ವರಾಜ್ಯ ಕಲಂಗುಟ್ ಸಂಘಟನೆಯ ವತಿಯಿಂದ ಛತ್ರಪತಿ ಶುವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಕಲಂಗುಟ್ ಪಂಚಾಯತ್ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ 10 ದಿನಗಳಲ್ಲಿ ಈ ಪ್ರತಿಮೆಯನ್ನು ತೆಗೆದುಹಾಕುವಂತೆ ಆದೇಶವನ್ನು ನೀಡಿದೆ.
