ಉದಯವಾಹಿನಿ, ಕುಟುಂಬ ಸದಸ್ಯರಲ್ಲಿ ಒಬ್ಬರಾಗುವ ನಾಯಿಗಳು ಮನೆಯಲ್ಲಿ ನಾಯಿ ಸಾಕೋದು ಅಂದ್ರೆ ಹೊಸ ಅತಿಥಿಯನ್ನು ಬರಮಾಡಿಕೊಂಡಂತೆ. ಸಾಕಿರುವ ನಾಯಿಗಳು ಕುಟುಂಬದ ಭಾಗವಾಗಿರುತ್ತವೆ. ಕೆಲಸದಿಂದ ದಣಿದು ಬಂದ್ರೆ ನಾಯಿಗಳು ಬಾಲ ಅಲ್ಲಾಡಿಸಿಕೊಂಡು ನಿಮ್ಮನ್ನು ಅಪ್ಪಿಕೊಳ್ಳಲು ಬರುತ್ತವೆ. ಈ ಅಪ್ಪುಗೆ ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ನಾಯಿಗಳನ್ನು ಸಾಕಿರೋರು ಎಂದಿಗೂ ಕೆಲವು ತಪ್ಪುಗಳನ್ನು ಮಾಡಬಾರದು.
ನಾಯಿಗಳಿಗೂ ಆಗುತ್ತೆ ಮಾನಸಿಕ ಖಿನ್ನತೆ ಎಷ್ಟೇ ಜಾಗ್ರತೆಯಿಂದ ನೋಡ್ಕೊಂಡ್ರೂ ಪ್ರಾಣಿ ಸಾಕಣೆಯಲ್ಲಿ ಕೆಲವು ತಪ್ಪುಗಳಾಗುತ್ತವೆ. ಈ ತಪ್ಪುಗಳೆಂದು ಅರಿತ ಕೂಡಲೇ ಮತ್ತೆ ಪುನಾರ್ವತಿಸಬಾರದು. ಸಾಕು ಪ್ರಾಣಿಗಳಿಗೆ ನೀಡುವ ಆಹಾರ, ವ್ಯಾಯಾಮ, ವಿಶ್ರಾಂತಿ ಹೀಗೆ ಎಲ್ಲದರಲ್ಲೂ ಗಮನ ನೀಡಬೇಕಾಗುತ್ತದೆ. ನಾಯಿಗಳ ಜೊತೆ ಮಾಲೀಕರು ಅವುಗಳೊಂದಿಗೆ ದಿನಕ್ಕೆ ಒಂದಿಷ್ಟು ಸಮಯವನ್ನು ಕಳೆಯುತ್ತವೆ. ಮನೆಯಲ್ಲಿ ಒಂಟಿಯಾಗಿದ್ದ ನಾಯಿಗಳು ಸಹ ಮಾನಸಿಕ ಖಿನ್ನತೆಗೆ ಒಳಗಾಗುತ್ತವೆ. ಇದರಿಂದ ಕಡಿಮೆ ಸಮಯದಲ್ಲಿಯೇ ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ.
ವೈದ್ಯಕೀಯ ಪರೀಕ್ಷೆ: ಸಾಕು ಪ್ರಾಣಿಗಳನ್ನ ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ನಿಮ್ಮ ಸಾಕು ಪ್ರಾಣಿಗಳ ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ತಜ್ಞ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿಗಳು ಸಾಕು ಪ್ರಾಣಿಗಳಿಗೆ ನೀಡಬೇಡಿ. ತೊಂದರೆ ಆಗೋದಕ್ಕಿಂತ ಮುಂಚೆಯೇ ನಿಯಮಿತವಾಗಿ ವೈದ್ಯರ ಬಳಿ ನಾಯಿಯನ್ನು ಕರೆದುಕೊಂಡು ಹೋಗುತ್ತಿರಬೇಕು. ಪ್ರಾಣಿಗಳ ಮಾನಸಿಕ ಆರೋಗ್ಯ ಮುಖ್ಯ. ವ್ಯಾಯಾಮ ಮಾತ್ರ ಸಾಲದು. ಚೆನ್ನಾಗಿರಬೇಕಾದ್ರೆ ಅವು ಶಾಂತವಾಗಿರಬೇಕು. ಅವುಗಳನ್ನ ಒಂಟಿ ಬಿಡಬಾರದು. ಇದರಿಂದ ಅವುಗಳ ಸ್ವಭಾವದಲ್ಲಿ ಬದಲಾವಣೆ ಆಗಬಹುದು. ಮಾನಸಿಕ ಖಿನ್ನತೆಯಿಂದ ಮನೆಯಲ್ಲಿರುವ ಸದಸ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇಡೀ ದಿನ ಮನೆಯಲ್ಲಿಯೇ ನಾಯಿಗಳನ್ನು ಕಟ್ಟಿ ಹಾಕಬಾರದು. ದಿನಕ್ಕೊಮೆಯಾದ್ರು ಅವುಗಳನ್ನು ಕರೆದುಕೊಂಡು ವಾಕ್ ಹೋಗಬೇಕು. ಪ್ರಾಣಿಗಳ ಹಾಗೆ ಗಿಡಗಳನ್ನೂ ಬೆಳೆಸ್ತೀವಿ. ಆದ್ರೆ ಎಲ್ಲಾ ಗಿಡಗಳು ಪ್ರಾಣಿಗಳಿಗೆ ಒಳ್ಳೆಯದಲ್ಲ. ಕೆಲವು ಗಿಡಗಳು ಅವುಗಳಿಗೆ ಹಾನಿಕಾರಕ. ಅಂಥ ಗಿಡಗಳನ್ನ ಮನೆಯಲ್ಲಿ ಬೆಳೆಸಬಾರದು. ಗೂಗಲ್‌ನಲ್ಲಿ ಅಪಾಯಕಾರಿ ಅಥವಾ ವಿಷಕಾರಿ ಸಸ್ಯಗಳ ಮಾಹಿತಿ ನೀಡಲಾಗಿರುತ್ತದೆ.
