ಉದಯವಾಹಿನಿ, ಈಗ ಎಲ್ಲೆಲ್ಲೂ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಿದೆ. ಇದುವರೆಗೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನಿಜವೇ ಆಗಿದ್ದಲ್ಲಿ, ಸದ್ಯ ಆ್ಯಂಕರ್ ಅನುಶ್ರೀ ಅವರು ಸದ್ಯ ಮದುವೆಯ ಮೂಡ್ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ ‘ಅನುಪತಿ’ ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್ ಆಗಿದೆ.
ಆದರೆ, ಅನುಶ್ರೀ ಅವರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ವಿಸಿಟ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಗೊತ್ತಿದ್ದೇ ಅನುಶ್ರೀ ಅವರು ಇದೀಗ ಡಾ.ರಾಜ್ಕುಮಾರ್ ಅವರ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ, ಡಾ.ರಾಜ್ಕುಮಾರ್ ಅವರು ಸಿನಿಮಾದ ಡೈಲಾಗ್ ಒಂದಿದೆ. ಹಿನ್ನೆಲೆಯಲ್ಲಿ ನಟಿ ಅಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು. ಆಗ ರಾಜ್ ಅವರು, ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಅನುಶ್ರೀ ಹೀಗೆ ಹೇಳಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ. ಅನುಶ್ರೀ ಅವರು ಈ ವರ್ಷವೇ ಮದುವೆಯಾಗುತ್ತೇನೆ ಎಂದಿದ್ದು ಸುಳ್ಳಲ್ಲ. ಪುನೀತ್ ರಾಜ್ಕುಮಾರ್ ತೋರಿಸಿದ ಹುಡುಗನ ಜೊತೆ ಅವರ ಮದುವೆ ಎಂದು ಹೇಳಲಾಗುತ್ತಿದೆ. ಕೈಗೆ ಬ್ಯಾಂಡೇಜ್ ಮಾಡಿಕೊಂಡ ಯುವಕ, ಅನುಶ್ರೀ ಅವರ ಭಾವಿ ಪತಿ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಅನುಶ್ರೀಯಾಗಲೀ, ಅವರ ಕುಟುಂಬಸ್ಥರಾಗಲೀ ಎಲ್ಲಿಯೂ ಅಧಿಕೃತ ಮಾಹಿತಿ ಕೊಟ್ಟಿಲ್ಲ.
