ಉದಯವಾಹಿನಿ, ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.ಬೆಂಗಳೂರಿನ ಮೂವರು ಹಾಗೂ ಮಡಿಕೇರಿ, ಮೈಸೂರು ನಗರ, ತುಮಕೂರು, ಕಲಬುರಗಿ, ಕೊಪ್ಪಳ ಜಿಲ್ಲೆಯ ತಲಾ ಒಬ್ಬ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಡಾ.ವಾಸಂತಿ ಅಮರ್ ಬಿ.ವಿ (IAS), ವಿಶೇಷ ಜಿಲ್ಲಾಧಿಕಾರಿ – ಬೆಂಗಳೂರು ನಗರ ಜಿಲ್ಲೆ.
ಬೆಂಗಳೂರು: ಬಗಲಿ ಮಾರುತಿ, ಅಸಿಸ್ಟೆಂಟ್ ಡೈರೆಕ್ಟರ್, ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆ, ಸಹಕಾರನಗರ, ಬೆಂಗಳೂರು.
ಬೆಂಗಳೂರು: ಹೆಚ್.ವಿ.ಯರಪ್ಪ ರೆಡ್ಡಿ, ಎಕ್ಸಿಕ್ಯುಟಿವ್ ಇಂಜಿನಿಯರ್ – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಿ.ವಿ.ರಾಮನ್ ನಗರ.
ಮಡಿಕೇರಿ : ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ – ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ.
ಮೈಸೂರು ನಗರ : ಬಿ.ವೆಂಕಟರಾಮ್​, ಆಫೀಸ್ ಅಸಿಸ್ಟೆಂಟ್ – ಮೈಸೂರು ಮಹಾನಗರ ಪಾಲಿಕೆ.
ಮೈಸೂರು ನಗರ : ಮಂಜುನಾಥಸ್ವಾಮಿ, ಕೌಶಲ್ಯಾಭಿವೃದ್ಧಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ, ಸಾತಗಳ್ಳಿ.
ತುಮಕೂರು : ರಾಜೇಶ್ ಎಂ, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಐಎಡಿಬಿ ತುಮಕೂರು ವಲಯ ಕಚೇರಿ.
ಕಲಬುರಗಿ : ಸುನಿಲ್‌ ಕುಮಾರ್, ಎಕ್ಸಿಕ್ಯುಟಿವ್ ಇಂಜಿನಿಯರ್ – ಕುಟುಂಬ ಮತ್ತು ಕಲ್ಯಾಣ ಕಚೇರಿ, ಎಂಜಿನಿಯರಿಂಗ್ ವಿಭಾಗ, ಕಲಬುರಗಿ.
ಕೊಪ್ಪಳ : ಶೇಕು, ಅಸಿಸ್ಟೆಂಟ್ ಡೈರೆಕ್ಟರ್ – ಜಿಲ್ಲಾ ಕೈಗಾರಿಕಾ ಕೇಂದ್ರ (DIC), ಕೊಪ್ಪಳ.
ಮಾರುತಿ ಬಗಲಿ ಅವರಿಗೆ ಸೇರಿದ್ದು ಎನ್ನಲಾದ ಬಳ್ಳಾರಿಯ ಮನೆ ಮೇಲೂ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೆ 10 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯುಟಿವ್ ಇಂಜಿನಿಯರ್​ ಯರಪ್ಪ ರೆಡ್ಡಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬೆಂಗಳೂರಿನಲ್ಲಿ ಎಸ್‌ಪಿ ವಂಶಿಕೃಷ್ಣ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.ಉದ್ಯಮಿ ಕೆಜಿಎಫ್ ಬಾಬು ಮನೆ ಮೇಲೆ ಆರ್‌ಟಿಒ ಅಧಿಕಾರಿಗಳ ದಾಳಿ: ಮಹಾರಾಷ್ಟ್ರದಲ್ಲಿ ನೋಂಣಿಯಾದ ಕಾರನ್ನು ರಸ್ತೆ ಸಾರಿಗೆ ತೆರಿಗೆ ಪಾವತಿಸದೇ ಕರ್ನಾಟಕದಲ್ಲಿ ಬಳಸುತ್ತಿದ್ದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ಇಂದು ಬೆಳ್ಳಂಬೆಳಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ವಸಂತನಗರದಲ್ಲಿರುವ ಬಾಬು ಅವರ ನಿವಾಸದ ಮೇಲೆ ಆರ್‌ಟಿಒ ಜಂಟಿ ಆಯುಕ್ತರಾದ ಎಂ.ಶೋಭಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಟ್ಯಾಕ್ಸ್ ಪಾವತಿಸುವಂತೆ ಸೂಚಿಸಿ ತೆರಳಿದ್ದಾರೆ.ಐಷಾರಾಮಿ ರೋಲ್ಸ್ ರಾಯ್ಸ್, ವೆಲ್ಶ್ ಫೈರ್, ಪೋರ್ಶೆ ಸೇರಿದಂತೆ ಹಲವು ಕಾರುಗಳ ಮಾಲೀಕರಾಗಿರುವ ಕೆಜಿಎಫ್ ಬಾಬು ಅವರು ಮುಂಬೈನಲ್ಲಿ ನೋಂಣಿಯಾದ ಕಾರನ್ನ 1 ವರ್ಷಗಳಿಗೂ ಅಧಿಕ ಸಮಯದಿಂದ ಬೆಂಗಳೂರಿನಲ್ಲಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!