ಉದಯವಾಹಿನಿ, ತಿರುಪತಿ,ಆಂಧ್ರಪ್ರದೇಶ: ತಿರುಮಲ ತಿರುಪತಿ ದೇವಸ್ಥಾನಂ ಮಂಗಳವಾರ ತಿರುಮಲದಲ್ಲಿ ಆಹಾರ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಈ ಪ್ರಯೋಗಾಲಯ ತುಪ್ಪ ಮತ್ತು ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸಿ, ಅದರ ಗುಣಮಟ್ಟವನ್ನು ತಿಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮೊದಲು ಆಹಾರಗಳನ್ನು ಪರೀಕ್ಷೆಗಾಗಿ ಇತರ ರಾಜ್ಯಗಳಿಗೆ ಕಳುಹಿಸಬೇಕಾಗಿತ್ತು. ಆದರೆ ಈಗ ಆಹಾರದ ಮಾದರಿಗಳನ್ನು ಅತ್ಯಾಧುನಿಕ ಉಪಕರಣಗಳೊಂದಿಗೆ ತಿರುಮಲದಲ್ಲಿಯೇ ನೇರವಾಗಿ ಪರೀಕ್ಷಿಸಬಹುದು ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮೊದಲ ಬಾರಿಗೆ ಗ್ಯಾಸ್ ಕ್ರೊಮ್ಯಾಟೋಗ್ರಾಫ್, ಹೈ ಪರ್ಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಾಫ್ ಉಪಕರಣಗಳ ಬಳಕೆ: ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಅವರ ಪ್ರಕಾರ, ಈ ಹಿಂದೆ ತಿರುಮಲದಲ್ಲಿ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಯಾವುದೇ ಸೌಲಭ್ಯವಿರಲಿಲ್ಲ. ಈಗ ಮೊದಲ ಬಾರಿಗೆ ಜಿಸಿ (ಗ್ಯಾಸ್ ಕ್ರೊಮ್ಯಾಟೋಗ್ರಾಫ್) ಮತ್ತು ಎಚ್‌ಪಿಎಲ್‌ಸಿ (ಹೈ ಪರ್ಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಾಫ್) ನಂತಹ ಉಪಕರಣಗಳನ್ನು ಸ್ಥಾಪಿಸಲಾಗಿದೆ.
ಕಲಬೆರೆಕೆ ಕಂಡು ಹಿಡಿಯಲಿರುವ ಪ್ರಯೋಗಾಲಯ: ಈ ಉಪಕರಣವು ಕಲಬೆರಕೆ ಮತ್ತು ತುಪ್ಪದ ಗುಣಮಟ್ಟದ ಶೇಕಡಾವಾರು ಪ್ರಮಾಣವನ್ನು ತಕ್ಷಣ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಇದು ಆಹಾರದ ಗುಣಮಟ್ಟವನ್ನು ತಕ್ಷಣವೇ ಕಂಡು ಹಿಡಿದು, ಬಳಕೆಗೆ ಯೋಗ್ಯವೇ ಇಲ್ಲವೇ ಎಂಬುದನ್ನು ತಿಳಿಸಲಿದೆ. ಇದರಿಂದಾಗಿ ಬೇರೆ ರಾಜ್ಯಗಳಿಗೆ ಮಾದರಿಗಳನ್ನು ಕಳುಹಿಸಿ, ಅದರ ವರದಿ ಬರಲು ಸಮಯ ಬೇಕಾಗುತ್ತಿತ್ತು. ಈಗ ಪ್ರಯೋಗಾಲಯ ತಿರುಪತಿಯಲ್ಲೇ ಆಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೇ, ಸಮಯ ಮತ್ತು ವಿಳಂಬ ಇಲ್ಲದೇ ತಕ್ಷಣಕ್ಕೆ ಕೆಲಸವಾಗಲಿದೆ.

Leave a Reply

Your email address will not be published. Required fields are marked *

error: Content is protected !!