ಉದಯವಾಹಿನಿ, ನವದೆಹಲಿ: ವ್ಯಕ್ತಿಯೊಬ್ಬ ತನ್ನ ಮಗುವಿಗೆ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಸಿ ಹಾಲು ಕುಡಿಯಲು ಬಿಡುತ್ತಿರುವ ವಿಡಿಯೊ ವೈರಲ್ (Viral Video) ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ಅನೇಕ ಜನರು ಇದನ್ನು ಅಸುರಕ್ಷಿತ ಮತ್ತು ಬೇಜವಾಬ್ದಾರಿಯುತ ಪಾಲನೆ ಎಂದು ಕರೆಯುತ್ತಿದ್ದಾರೆ. ಇದು ಮಗುವಿಗೆ ಒಳ್ಳೆಯದೇ? ದಯವಿಟ್ಟು ಉತ್ತರಿಸಿ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಹಸುವಿನಿಂದ ನೇರವಾಗಿ ಮಗುವಿಗೆ ಹಸಿ, ಪಾಶ್ಚರೀಕರಿಸದ ಹಾಲನ್ನು ನೀಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವಿಡಿಯೊದಲ್ಲಿ, ಮಗು ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯುತ್ತಿರುವುದನ್ನು ಕಾಣಬಹುದು. ಮಗುವಿಗೆ ಹಸುವಿನಿಂದ ನೇರವಾಗಿ ಹಾಲು ಕುಡಿಸುತ್ತಾ ಆ ವ್ಯಕ್ತಿ ನೋಡುತ್ತಾ ನಗುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ದೃಶ್ಯವು ತ್ವರಿತವಾಗಿ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ತೀವ್ರ ಆಘಾತ ಮತ್ತು ಕಳವಳವನ್ನುಂಟು ಮಾಡಿದೆ.
ಬಳಕೆದಾರರೊಬ್ಬರು, ಇದು ಒಳ್ಳೆಯದಲ್ಲ. ಹಸಿ ಹಾಲಿನಲ್ಲಿ ಮಕ್ಕಳಿಗೆ ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ಬ್ಯಾಕ್ಟೀರಿಯಾಗಳನ್ನು ಪಾಶ್ಚರೀಕರಣ ಅಥವಾ ಹಾಲನ್ನು ಬೇಯಿಸುವ ಮೂಲಕ ತೆಗೆದುಹಾಕಲಾಗುತ್ತದೆ. ಇನ್ನೊಬ್ಬ ವ್ಯಕ್ತಿ, ಮಗು ಅನೇಕ ರೋಗಕಾರಕಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಕೆಲವರು ಇದನ್ನು ಮಕ್ಕಳ ಮೇಲಿನ ದೌರ್ಜನ್ಯ ಎಂದು ಹೇಳಿದ್ದಾರೆ. ತಂದೆ ತನ್ನ ಮಗುವಿನ ಜೀವವನ್ನು ಪಣಕ್ಕಿಟ್ಟಿದ್ದಾರೆ ಎಂದು ಆರೋಪಿಸಿದರು. ಅನೇಕ ಜನರು ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅವರು ಮಗುವಿನ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಹೇಳಿದರು.ಕೇರಳದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಎಂಬುವವರು, ಎಕ್ಸ್‌ನಲ್ಲಿ ವಿಡಿಯೊವನ್ನು ಮರುಪೋಸ್ಟ್ ಮಾಡಿ ಹಸಿ ಹಾಲು ಎಷ್ಟು ಅಪಾಯಕಾರಿ ಎಂದು ವಿವರಿಸಿದರು. ವಿಶೇಷವಾಗಿ ಶಿಶುಗಳಿಗೆ ಹಸಿ ಹಾಲು ಅಪಾಯಕಾರಿ. ಹಸಿ ಹಾಲು ಇ. ಕೋಲಿ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡರೆ, ಮಗು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅವರು ಎಚ್ಚರಿಸಿದರು.

 

Leave a Reply

Your email address will not be published. Required fields are marked *

error: Content is protected !!