ಉದಯವಾಹಿನಿ, ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸೋದು ಕಷ್ಟನೇ ಬಿಡಿ. ಅದರಲ್ಲಿ ಒಂದೋ ಎರಡೋ ಮಕ್ಕಳಿರುವ ಕಾರಣ ಹೆತ್ತವರು ಹೆಚ್ಚು ಮುದ್ದು ಮಾಡಿ ಮಕ್ಕಳನ್ನು ಬೆಳೆಸುತ್ತಾರೆ. ಮೂರು ನಾಲ್ಕು ವರ್ಷ ಆಗುತ್ತಿದ್ದಂತೆ ನರ್ಸರಿಗೇನೋ ಸೇರಿರುತ್ತಾರೆ. ಆದರೆ ಈ ಮಕ್ಕಳನ್ನು ಓದಿಸುವುದು ಹಾಗೂ ಹೋಮ್ ವರ್ಕ್    ಮಾಡಿಸುವ ಕಷ್ಟ ಯಾರಿಗೂ ಬೇಡ. ಈ ವಿಡಿಯೋ ನೋಡಿದ್ರೆ ಈ ರೀತಿ ಕೂಡ ಹೋಮ್ ವರ್ಕ್ ಮಾಡಬಹುದಾ ಎಂದು ನಿಮಗೆ ಅನಿಸಿದ್ರೂ ತಪ್ಪೇನಿಲ್ಲ. ಸಾಮಾನ್ಯವಾಗಿ ಮಕ್ಕಳು ಕುಳಿತುಕೊಂಡು ಇಲ್ಲವಾದರೆ ಮಲಗಿಕೊಂಡು ಬರೆಯುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಪುಟ್ಟ ಮಗುವೊಂದು ಕುರ್ಚಿಯ ಮೇಲೆ ತನ್ನ ಎರಡು ಕಾಲಿಟ್ಟು, ತಲೆಕೆಳಗಾಗಿ ಮಲಗಿಕೊಂಡು ಹೋಂವರ್ಕ್ ಮಾಡಿದೆ. ಈ ಪುಟಾಣಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ(Social media) ಸಖತ್ ವೈರಲ್ ಆಗುತ್ತಿದೆ.

@KodaiA2-Holiday ಹೆಸರಿನ ಎಕ್ಸ್ ಖಾತೆಯಲ್ಲಿ ಪುಟಾಣಿ ಹೋಮ್ ವರ್ಕ್ ಮಾಡುತ್ತಿರುವ ವಿಡಿಯೋವೊಂದು ಹಂಚಿಕೊಳ್ಳಲಾಗಿದ್ದು, ಹೋಮ್ ವರ್ಕ್ ಮುಗಿಸಲೇಬೇಕು ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಕುರ್ಚಿ ಮೇಲೆ ತಲೆಕೆಳಗಾಗಿ ಮಲಗಿಕೊಂಡು ಹೋಮ್ ವರ್ಕ್ ಮಾಡುವುದರಲ್ಲಿ ಬ್ಯುಸಿಯಾಗಿದೆ. ಪುಸ್ತಕಗಳನ್ನು ನೆಲೆದ ಮೇಲೆ ಹರಡಿಕೊಂಡಿದ್ದು, ತಮ್ಮ ಎರಡು ಕಾಲುಗಳನ್ನು ಕುರ್ಚಿ ಮೇಲೆ ಇಟ್ಟುಕೊಂಡು ತಲೆಕೆಳಗಾಗಿ ಮಲಗಿ ಬರೆಯುವುದನ್ನು ನೀವಿಲ್ಲಿ ನೋಡಬಹುದು.

Leave a Reply

Your email address will not be published. Required fields are marked *

error: Content is protected !!