ಉದಯವಾಹಿನಿ, ಬಾಲಿವುಡ್‌ನಲ್ಲಿ ಶೂಟಿಂಗ್ ಸಮಯದಲ್ಲಿ ನಟರು ಅನಾನುಕೂಲ ಅನುಭವಿಸುವ ಅನೇಕ ನಿದರ್ಶನಗಳಿವೆ. ಅಥವಾ ಅವರು ತಮ್ಮ ಸಹನಟರೊಂದಿಗೆ ಕೆಲಸ ಮಾಡುವಾಗ ಸಂಕಷ್ಟ ಅನುಭವಿಸಿದ್ದೂ ಇರುತ್ತದೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅವರೇ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ನಟಿ ವಿದ್ಯಾ ಬಾಲನ್ ಉದ್ಯಮದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ಅವರು ‘ಪರಿಣೀತಾ’ ಚಿತ್ರದ ಮೂಲಕ ತಮ್ಮ ಸಿನಿ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಅವರು ತಮ್ಮ ಅನುಭವದ ಬುತ್ತಿ ತೆಗೆದಿಟ್ಟಿದ್ದಾರೆ.
ವಿದ್ಯಾ ಬಾಲನ್ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರ ಅತ್ಯಂತ ಪ್ರಸಿದ್ಧ ಚಿತ್ರ ‘ದಿ ಡರ್ಟಿ ಪಿಕ್ಚರ್’. ಈ ಚಿತ್ರದಲ್ಲಿ ಅವರ ದಿಟ್ಟ ಅಭಿನಯ ಎಲ್ಲರನ್ನೂ ಅಚ್ಚರಿಗೊಳಿಸಿತು. ಅವರ ಅಭಿನಯ ಎಲ್ಲರನ್ನೂ ಮೆಚ್ಚಿಸಿತು. ಇತ್ತೀಚೆಗೆ, ಒಂದು ಸಂದರ್ಶನದಲ್ಲಿ, ವಿದ್ಯಾ ಬಾಲನ್ ಒಂದು ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಚಿತ್ರೀಕರಿಸಲಾಯಿತು ಎಂಬುದರ ಕುರಿತು ಮಾತನಾಡಿದ್ದರು. ಇದು ಮಾತ್ರವಲ್ಲದೆ, ಒಂದು ಇಂಟಿಮೇಟ್ ದೃಶ್ಯದ ಸಮಯದಲ್ಲಿ ಅವರು ಅನುಭವಿಸಿದ ವಿಚಿತ್ರ ಅನುಭವದ ಬಗ್ಗೆಯೂ ಅವರು ಹೇಳಿದರು. ‘ಒಂದು ಚಿತ್ರದಲ್ಲಿ ಒಂದು ಇಂಟಿಮೇಟ್ ದೃಶ್ಯವಿತ್ತು. ಆ ಸಮಯದಲ್ಲಿ, ನಟ ಚೈನೀಸ್ ಫುಡ್ ತಿಂದು ಬಂದಿದ್ದ ಮತ್ತು ಅವರು ದೃಶ್ಯಕ್ಕೆ ಮೊದಲು ಹಲ್ಲುಜ್ಜಿರಲಿಲ್ಲ. ಬಾಯಿಂದ ಬೆಳ್ಳುಳ್ಳು ವಾಸನೆ ಬರುತ್ತಿತ್ತು. ಆದರೂ, ನಾನು ಅವರೊಂದಿಗೆ ಇಂಟಿಮೇಟ್ ದೃಶ್ಯವನ್ನು ಮಾಡಿದ್ದೇನೆ’ ಎಂದು ಹೇಳಿದ್ದರು.
