ಉದಯವಾಹಿನಿ, ಕೌಲಾಲಂಪುರ: ವಿಮಾನದಲ್ಲಿ ಏರುಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯರನ್ನು ಮೂರ್ಖರು ಎಂದು ವ್ಯಕ್ತಿಯೊಬ್ಬ ಕರೆದಿದ್ದರಿಂದ ಇದು ಜಗಳಕ್ಕೆ ತಿರುಗಿದ ಘಟನೆ ವರದಿಯಾಗಿದೆ. ಕೌಲಾಲಂಪುರದಿಂದ ಚೀನಾದ ಚೆಂಗ್ಡುಗೆ ಹೊರಟಿದ್ದ ಏರ್ ಏಷ್ಯಾ ವಿಮಾನದಲ್ಲಿ, ಕ್ಯಾಬಿನ್ ದೀಪಗಳು ಮಂದವಾದ ನಂತರ ಜೋರಾಗಿ ಮಾತನಾಡುತ್ತಿದ್ದ ಮಹಿಳೆಯರಿಗೆ ವ್ಯಕ್ತಿಯೊಬ್ಬ ಮೂರ್ಖರು ಎಂದು ಕರೆದಿದ್ದಾನೆ. ಇದು ಜಗಳಕ್ಕೆ ಕಾರಣವಾಗಿದೆ. ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ. ಮಹಿಳೆಯರ ಗುಂಪಿನ ಹಿಂದೆ ಕುಳಿತಿದ್ದ ಪುರುಷ ಪ್ರಯಾಣಿಕನೊಬ್ಬ ಅವರ ಜೋರಾದ ಮಾತು ಕೇಳಿ ನಿರಾಶೆಗೊಂಡು, ಅವರ ಧ್ವನಿಯನ್ನು ಕಡಿಮೆ ಮಾಡಲು ಕೇಳಿಕೊಂಡಾಗ ವಾಗ್ವಾದ ಪ್ರಾರಂಭವಾಯಿತು. ಆ ವ್ಯಕ್ತಿ ಅವರನ್ನು ಮೂರ್ಖರು ಎಂದು ಕರೆದು ಬಾಯಿ ಮುಚ್ಚಿಕೊಳ್ಳಿ ಎಂದು ಹೇಳಿದಾಗ ಪರಿಸ್ಥಿತಿ ಉಲ್ಬಣಗೊಂಡಿತು.

ಗುಂಪಿನಲ್ಲಿದ್ದ ಒಬ್ಬ ಮಹಿಳೆ ತನ್ನ ಆಸನದ ಮೇಲೆ ಹತ್ತಿ ಆ ವ್ಯಕ್ತಿಗೆ ಹೊಡೆದಾಗ ಮಾತಿನ ಚಕಮಕಿ ಶೀಘ್ರದಲ್ಲೇ ಹಿಂಸಾತ್ಮಕವಾಯಿತು. ಮತ್ತೊಬ್ಬ ಮಹಿಳೆ ಅವನಿಗೆ ಹಿಂದಿನಿಂದ ಬಂದು ಹೊಡೆದಿದ್ದಾಳೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿ, ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!