
ಉದಯವಾಹಿನಿ, ಬೆಂಗಳೂರು: ನಗರದ ಎಂಪೈರ್ ಹೋಟೆಲ್‌ನಲ್ಲಿ ಕಬಾಬ್ ಅಸುರಕ್ಷಿತ ಎಂದು ವರದಿ ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಆಹಾರ ಸುರಕ್ಷತಾಧಿಕಾರಿಯಿಂದ ರೆಸ್ಟೋರೆಂಟ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಷ್ಠಿತ ಹೋಟೆಲ್‌ನಲ್ಲಿನ ಕಬಾಬ್ ಅಸುರಕ್ಷಿತ ಎಂದು ಪ್ರಯೋಗಾಲಯದ ವರದಿಯ್ಲಲ್ಲಿ ದೃಢಪಟ್ಟಿದ್ದು, ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಹೆಬ್ಬಾಳ ರೆಸ್ಟೋರೆಂಟ್‌ನಲ್ಲಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.
ಕಬಾಬ್ ಮಾದರಿ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಎಂಪೈರ್ ರೆಸ್ಟೋರೆಂಟ್‌ಗೆ ಆಹಾರ ಸುರಕ್ಷತಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಬಂಧನೆ 2011 ರ 2.4.1 ರಂತೆ ಆಹಾರ ಮಾರಾಟಗಾರರಾದ ನೀವು CFTRI, Mysore ಪ್ರಯೋಗಾಲಯದಲ್ಲಿ ಎರಡನೇ ಭಾಗದ ಆಹಾರ ಮಾದರಿಯನ್ನು ಪರೀಕ್ಷಿಸಲು ಇಚ್ಛಿಸಿದಲ್ಲಿ, ಪರೀಕ್ಷಾ ವೆಚ್ಚವನ್ನು ತಾವೇ ಭರಿಸಿ ಪರೀಕ್ಷೆ ಮಾಡಿಸಬೇಕು. ಈ ಪತ್ರ ತಲುಪಿದ 30 ದಿನಗಳ ಒಳಗಾಗಿ ಕಚೇರಿಗೆ ಮನವಿ ಸಲ್ಲಿಸಲು ತಿಳಿಸಿದೆ. 30 ದಿನಗಳ ಒಳಗಾಗಿ ತಮ್ಮಿಂದ ಯಾವುದೇ ಉತ್ತರ ಬರದಿದ್ದಲ್ಲಿ, FSSAI ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಹೋಟೆಲ್‌ಗೆ ಎಚ್ಚರಿಕೆ ನೀಡಲಾಗಿದೆ.
