ಉದಯವಾಹಿನಿ, ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದರು. ಇಂತಹ ವಿಚಾರ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗುವವರಿಗೆ ಶಿಕ್ಷೆ ಆಗ್ಬೇಕು. ಎದುರು ನಿಂತು ಮಾತನಾಡುವವರನ್ನು ಎದುರಿಸಬಹುದು. ಎಲ್ಲೋ ನಿಂತು ಮಾತಾಡುವವರನ್ನು ಹೇಗೆ ಸಹಿಸಿಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿಗಳು ನಿಜಕ್ಕೂ ಹೀಗೆ ಮಾಡಿದ್ದೇ ಆಗಿದ್ರೆ ತಪ್ಪು. ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ, ಸಂತೋಷವಾಗಿಟ್ಟುಕೊಳ್ಳಿ. ಯಾವ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ಎಂದಿದ್ದಾರೆ.
ಗಾಳಿಯಲ್ಲಿ ಗುಂಡು ಹೊಡೆಯುವವರನ್ನು ಕೇರ್ ಮಾಡಲ್ಲ ನಾನು. ಹೀರೋಗೆ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ಆದರೆ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ನಾನೇ ರಮ್ಯಾಗೆ ಹೇಳ್ತೀನಿ ಪಾಠ ಕಲಿಸಿ, ಎಂದಿದ್ದಾರೆ.‌

Leave a Reply

Your email address will not be published. Required fields are marked *

error: Content is protected !!