ಉದಯವಾಹಿನಿ, ನವದೆಹಲಿ: ಲಂಡನ್‌ನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ ಐದನೇ ಹಾಗೂ ಟೆಸ್ಟ್‌ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಟಾಸ್‌ ಸೋತ ಭಾರತ ತಂಡ ಮೊದಲು ಬ್ಯಾಟ್‌ ಮಾಡುವಂತಾಯಿತು. ಈ ವೇಳೆ ಪ್ರವಾಸಿ ತಂಡದ ಪ್ಲೇಯಿಂಗ್‌ XIಗೆ ಸಂಬಂಧಿಸಿದ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಗೊಂದಲಕ್ಕೆ ಒಳಗಾದ ಪ್ರಸಂಗ ನಡೆಯಿತು. ಭಾರತ ತಂಡ ತನ್ನ ಆಡುವ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆದರೆ, ಗಿಲ್‌ ಕೇವಲ ಮೂರು ಬದಲಾವಣೆ ಮಾತ್ರ ಹೇಳಿದ್ದರು. ಅಂದ ಹಾಗೆ ಈಗಾಗಲೇ ನಾಲ್ಕು ಟೆಸ್ಟ್‌ ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಓವಲ್‌ ಟೆಸ್ಟ್‌ ಗೆದ್ದು ಸರಣಿಯನ್ನು 2-2 ಅಂತರದಲ್ಲಿ ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.
ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ಈ ಸರಣಿಯ ಐದನೇ ಪಂದ್ಯದಲ್ಲಿಯೂ ಟಾಸ್‌ ಸೋತರು. ಆ ಮೂಲಕ ಟೀಮ್‌ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 15ನೇ ಬಾರಿ ಟಾಸ್‌ ಸೋಲುವಂತಾಯಿತು. ಕಳೆದ ಜನವರಿಯಲ್ಲಿ ಭಾರತ ತಂಡ ತವರು ಟಿ20ಐ ಪಂದ್ಯದಲ್ಲಿ ಕೊನೆಯ ಬಾರಿ ಟಾಸ್‌ ಗೆದ್ದಿದ್ದರು. ಇದಾದ ಬಳಿಕ ಟೀಮ್‌ ಇಂಡಿಯಾ ಸತತವಾಗಿ 15ಬಾರಿ ಟಾಸ್‌ ಸೋತಿದೆ. ಇನ್ನು ಟೆಸ್ಟ್‌ ಕ್ರಿಕೆಟ್‌ ಇಕತಿಹಾಸದಲ್ಲಿ 14ನೇ ಬಾರಿ ಭಾರತ ತಂಡ ಟೆಸ್ಟ್‌ ಸರಣಿಯ ಎಲ್ಲಾ ಐದು ಪಂದ್ಯಗಳಲ್ಲಿ ಟಾಸ್‌ ಸೋತಿರುವುದು. 2018ರ ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡ ಎಲ್ಲಾ ಪಂದ್ಯಗಳಲ್ಲಿಯೂ ಟಾಸ್‌ ಸೋತಿತ್ತು.

Leave a Reply

Your email address will not be published. Required fields are marked *

error: Content is protected !!