ಉದಯವಾಹಿನಿ, ನವದೆಹಲಿ: ಏಕದಿನ ವಿಶ್ವಕಪ್ 2023 ಪ್ರಾರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದೇ ಅಕ್ಟೋಬರ್-ನವೆಂಬರ್ನಲ್ಲಿ ಭಾರತವು ಪಂದ್ಯಾವಳಿಯ ಆತಿಥ್ಯ ವಹಿಸಲಿದೆ. ಅದ್ರಂತೆ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶೀಘ್ರದಲ್ಲೇ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಿದೆ. ಆದರೆ ಇದಕ್ಕೂ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೊಡ್ಡ ಹಿನ್ನಡೆಯನ್ನ ಅನುಭವಿಸಿದೆ. ವಾಸ್ತವವಾಗಿ, ಪಿಸಿಬಿ, ಐಸಿಸಿ ಮತ್ತು ಬಿಸಿಸಿಐಗೆ ಬೇಡಿಕೆ ಸಲ್ಲಿಸಿತ್ತು. ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳ ಸ್ಥಳಗಳನ್ನ ಬದಲಾಯಿಸುವಂತೆ ಮನವಿ ಮಾಡಿದ್ದರು. ಪಿಸಿಬಿ ತನ್ನ ಎರಡು ಪಂದ್ಯಗಳ ಸ್ಥಳಗಳನ್ನ ಬದಲಾಯಿಸಲು ಬಯಸಿದೆ. ಅದ್ರಂತೆ, ಪಾಕಿಸ್ತಾನವು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯವನ್ನ ಆಡಬೇಕಾಗಿದೆ. ಅದಾದ ಬಳಿಕ ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಡೆಯಲಿದೆ. ವರದಿಗಳ ಪ್ರಕಾರ, ಪಾಕಿಸ್ತಾನದ ಮಂಡಳಿಯು ಎರಡು ಸ್ಥಳಗಳನ್ನ ಬದಲಾಯಿಸುವಂತೆ ಒತ್ತಾಯಿಸಿತ್ತು. ಆದ್ರೆ, ಈ ಮನವಿಯನ್ನ ಪಾಕಿಸ್ತಾನ ನಿರಾಕರಿಸಿದೆ.
