ಉದಯವಾಹಿನಿ, ನವದೆಹಲಿ: ಡೊನಾಲ್ಡ್ ಟ್ರಂಪ್ ತೆರಿಗೆ ಸಮರ ಸಾರಿದ ಬೆನ್ನಲ್ಲೇ ಅಮೆರಿಕದಿಂದ ಎಫ್-35 ಯುದ್ಧ ವಿಮಾನವನ್ನು ಭಾರತ ಖರೀದಿಸದೇ ಇರಲು ನಿರ್ಧರಿಸಿದೆ. ಹೌದು. ಭಾರತ ಐದನೇ ತಲೆಮಾರಿನ ಯುದ್ಧ ವಿಮಾನ ಖರೀದಿಸಲು ಆಸಕ್ತಿ ವಹಿಸಿದೆ. ಮೋದಿ ಅವರ ಅಮೆರಿಕ ಪ್ರವಾಸದ ಸಮಯದಲ್ಲಿ ಟ್ರಂಪ್ ಅಮೆರಿಕ ಭಾರತಕ್ಕೆ ಎಫ್ 35 ವಿಮಾನ ನೀಡುವ ಆಫರ್ ನೀಡಿದ್ದರು.
ಈ ಆಫರ್ ಪ್ರಕಟವಾದ ನಂತರ ಭಾರತ ಎಫ್-35 (F-35) ಖರೀದಿ ಸಂಬಂಧ ಮಾತುಕತೆ ನಡೆಸಿತ್ತು. ಆದರೆ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ ಬೆನ್ನಲ್ಲೇ ಭಾರತ ಎಫ್-35 ಖರೀದಿಸದೇ ಇರಲು ತೀರ್ಮಾನಿಸಿದೆ ಎಂದು ಬ್ಲೂಮ್‌ಬರ್ಗ್ ಭಾರತದ ಖಚಿತ ಮೂಲಗಳನ್ನು ಆಧರಿಸಿ ವರದಿ ಮಾಡಿದೆ.
ನರೇಂದ್ರ ಮೋದಿ ಸರ್ಕಾರವು ದೇಶೀಯವಾಗಿ ಜಂಟಿಯಾಗಿ ರಕ್ಷಣಾ ಉಪಕರಣಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಅಮೆರಿಕಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ
