ಉದಯವಾಹಿನಿ, ನವದೆಹಲಿ: ದೇಶಿ ಟೆಸ್ಟ್ ಕ್ರಿಕೆಟ್‌ನ ಹಲವು ಟೂರ್ನಿಗಳಲ್ಲಿ ಒಂದಾಗಿರುವ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಅಧೀಕೃತವಾಗಿ ಆರಂಭವಾಗಲಿದೆ. ಇನ್ನು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ಉತ್ತರ ವಲಯ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಉಭಯ ತಂಡಗಳು 15 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಪೂರ್ವ ತಯಾರಿ ನಡೆಸುತ್ತಿವೆ. ಇನ್ನು ಇದರ ನಡುವೆ ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ ರಾಜ್ಯಗಳನ್ನು ಪ್ರತಿನಿಧಿಸುವ ಪೂರ್ವ ವಲಯ ತಂಡದ ನಾಯಕನಾಗಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶಾನ್ ನೇಮಕವಾಗಿದ್ದಾರೆ.
ಇಶಾನ್ ಕಿಶನ್ ಜೊತೆ ತಂಡದಲ್ಲಿ ಉಪನಾಯಕನಾಗಿ ಸಾಥ್ ನೀಡಲು ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಅವರನ್ನುಆರಿಸಲಾಗಿದೆ. ಈ ಇಬ್ಬರೂ ಆಟಗಾರರಿಗೆ ತಂಡದಲ್ಲಿ ಜವಾಬ್ದಾರಿ ನೀಡಲಾಗಿದೆ. ಈಶ್ವರನ್ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಸ್ಥಿರ ಪ್ರದರ್ಶನ ತೋರಿದ್ದಾರೆ. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಈ ಇಬ್ಬರು ಯುವ ಆಟಗಾರರ ನೇತೃತ್ವದಲ್ಲಿ ಈ ಬಾರಿ ದುಲೀಫ್ ಟ್ರೋಫಿಯಲ್ಲಿ ಪೂರ್ವ ವಲಯ ಕಣಕ್ಕಿಳಿಯಲಿದ್ದು ತೀವ್ರ ಕುತೂಹಲ ಮೂಡಿಸಿದೆ.
