ಉದಯವಾಹಿನಿ, ಲಂಡನ್: ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಇದೀಗ ನಡೆಯುತ್ತಿರುವ ಐದನೇ ಹಾಗೂ ಟೆಸ್ಟ್ ಸರಣಿಯ (ಕೊನೆಯ ಪಂದ್ಯದಲ್ಲಿ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಆಡುತ್ತಿದೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಬುಮ್ರಾ ಓವಲ್ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಬುಮ್ರಾ ಅನಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಅದರಂತೆ ಎರಡನೇ ದಿನ ಮಾರಕ ಬೌಲಿಂಗ್ ದಾಳಿ ನಡೆಸಿದ ಸಿರಾಜ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ದಿನದಾಟದ ಬಳಿಕ ನಿರ್ಗಮಿತ ಜಸ್‌ಪ್ರೀತ್ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರು ಜೊತೆಯಾಗಿ ಹಲವು ಮಾರಕ ಸ್ಪೆಲ್‌ಗಳನ್ನು ಹಾಕಿದ್ದಾರೆ. ಈ ಇಬ್ಬರು ಜೊತೆಯಾಗಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಬಿಸಿಸಿಐ ಜೊತೆ ಮಾತನಾಡಿದ ಮೊಹಮ್ಮದ್ ಸಿರಾಜ್‌ಗೆ ಬುಮ್ರಾ ಈ ಪಂದ್ಯದಲ್ಲಿ ಆಡಿ 5 ವಿಕೆಟ್ ಪಡೆಯಬೇಕಾದ ಅಗತ್ಯವಿತ್ತು, ಏಕೆ ಅವರು ನಿರ್ಗಮಿಸಿದ್ದಾರೆಂದು ಕೇಳಲಾಗಿತ್ತು. ಇದಕ್ಕೆ ಸಿರಾಜ್, ನಾನು ಪಂದ್ಯದಲ್ಲಿ ಆಡಿ 5 ವಿಕೆಟ್ ಪಡೆಯಬೇಕೆಂದು ಬುಮ್ರಾ ಹೇಳಿದ್ದರು ಎಂಬುದನ್ನು ರಿವೀಲ್ ಮಾಡಿದ್ದಾರೆ.
ನೀವು ಏಕೆ ಹೋಗುತ್ತಿದ್ದೀರಿ ಎಂದು ನಾನು ಜಸ್ಸಿ ಭಾಯ್‌ಗೆ (ಜಸ್‌ಪ್ರೀತ್ ಬುಮ್ರಾ) ಕೇಳಿದೆ. ಒಂದು ವೇಳೆ ನಾನು 5 ವಿಕೆಟ್ ಪಡೆದರೆ, ಯಾರನ್ನು ಅಪ್ಪಿಕೊಳ್ಳಲಿ? ಎಂದು ಬುಮ್ರಾಗೆ ಹೇಳಿದ್ದೆ. ಇದಕ್ಕೆ ಅವರು ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದರು. ನೀವು ಐದು ವಿಕೆಟ್‌ಗಳನ್ನು ಪಡೆಯಿರಿ. ಈ ರೀತಿಯ ಸಂಭಾಷಣೆಯನ್ನು ಮಾಡಿದ್ದೇವೆ,” ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ನಡೆಸಿದ ಮೊಹಮ್ಮದ್ ಸಿರಾಜ್, ಐದು ವಿಕೆಟ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅವರು ನಾಲ್ಕು ವಿಕೆಟ್ ಕಿತ್ತರು. ಭಾರತ ತಂಡದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲ್‌ಔಟ್ ಮಾಡಿದರು.
