ಉದಯವಾಹಿನಿ, ಚಿಕ್ಕಮಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಕಥೆ ಹೇಳ್ತಿರುವ ಗಿರೀಶ್ ಮಟ್ಟಣ್ಣನವರ್ ನಕ್ಸಲ್ ಪೀಡಿತ ಪ್ರದೇಶದಲ್ಲಿ ರೆಸಾರ್ಟ್ ಮಾಡಿದ್ದಾನೆ. ಈತನಿಗೆ ಎಲ್ಲಿಂದ ಆದಾಯ ಬಂತು? ಅಂತ ರಾಜ್ಯ ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತ ಪರಿಷತ್‌ನ ಉಪಾಧ್ಯಕ್ಷ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು, ಗಿರೀಶ್ ಮಟ್ಟಣ್ಣನವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಶೃಂಗೇರಿ ಸಿರಿಮನೆ ಫಾಲ್ಸ್ ಹತ್ತಿರ ಹತ್ತಾರು ಎಕ್ರೆಯಲ್ಲಿ ರೆಸಾರ್ಟ್ ಮಾಡಿದ್ದಾನೆ. ಇವನಿಗೆ ಆದಾಯ ಎಲ್ಲಿಂದ ಬರುತ್ತೆ ಸಿರಿಮನೆ, ಕಿಗ್ಗಾ, ಬುಕ್ಕಡಿಬೈಲ್ ಸುತ್ತಮುತ್ತಲಿನ ಪ್ರದೇಶ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಆ ನಕ್ಸಲ್ ಪೀಡಿತ ಜಾಗದಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾನೆ. ಸರ್ಕಾರ ಅದಿವಾಸಿಗಳಿಗೆ ನೀಡಿದ ವಸತಿ ಪ್ರದೇಶದಲ್ಲಿ ರೆಸಾರ್ಟ್ ಮಾಡಿದ್ದಾನೆ. ಇದೆಲ್ಲವನ್ನ ಹೇಗೆ ಮಾಡಿದ..? ಅಂತ ಪ್ರಶ್ನೆ ಮಾಡಿದ್ದಾರೆ.
ಎಡಪಂಥೀಯರ ತಂಡದಿಂದ ವ್ಯವಸ್ಥಿತ ಪಿತೂರಿ: ಇದು ಧರ್ಮಸ್ಥಳ ಹಾಗೂ ಧರ್ಮದ ಮೇಲೆ ಆಗ್ತಿರೋ ಗದಾ ಪ್ರಹಾರ. ದೇಶ ವಿರೋಧಿಗಳು, ಮತಾಂದರು ಹಿಂದೂಗಳ ಮೇಲೆ ಭಯೋತ್ಪಾದನೆ ಮಾಡ್ತಿದ್ದಾರೆ. ಅದಕ್ಕೆ ತತ್ಸಮಾನವಾಗಿ ಎಡಪಂಥಿಯರ ತಂಡ ಧರ್ಮದ ಮೇಲೆ ದಾಳಿ ಮಾಡ್ತಿದ್ದಾರೆ. ನಗರ ನಕ್ಸಲರು, ಕಾಡಿನಲ್ಲಿದ್ದವರಿಗೆ ಪರಿಹಾರ ನೀಡಿದ್ದು ಎಲ್ಲರೂ ನಗರದಲ್ಲಿದ್ದಾರೆ. ಅವರೆಲ್ಲರ ಸಹಕಾರದಿಂದ ಎಡಪಂಥೀಯರು ಸೇರಿ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಎಂದು ದೂರಿದ್ದಾರೆ.
