ಉದಯವಾಹಿನಿ, ಹೈದರಾಬಾದ್‌ : ಹೈದರಾಬಾದ್‌ನ ಮಿಯಾಪುರದಲ್ಲಿ ಕರ್ನಾಟಕದ ಕಲಬುರಗಿಯ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮಿಯಾಪುರದ ಮಕ್ತಾ ಮಹಬೂಬ್‌ಪೇಟೆಯಲ್ಲಿ ದುರಂತ ಸಂಭವಿಸಿದೆ. ಸ್ಥಳೀಯರಿಂದ ಮಾಹಿತಿ ದೊರೆತ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ನರಸಿಂಹ (60), ವೆಂಕಟಮ್ಮ (55), ಅನಿಲ್‌ (32), ಕವಿತಾ (24), ಮತ್ತು ಅಪ್ಪು (2) ಎಂದು ಗುರುತಿಸಲಾಗಿದೆ. ಕಲಬುರಗಿಯ ಲಕ್ಷ್ಮಯ್ಯ ಅವರ ಕುಟುಂಬವು ಕೆಲವು ಸಮಯದಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದೆ. ನರಸಿಂಹ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.
ಏತನ್ಮಧ್ಯೆ, ನರಸಿಂಹ, ಅವರ ಪತ್ನಿ ವೆಂಕಟಮ್ಮ ಅವರ ಎರಡನೇ ಮಗಳು ಮತ್ತು ಅಳಿಯ ತಮ್ಮ ಮಗುವಿನೊಂದಿಗೆ ಮಕ್ತಾ ಮಹಬೂಬ್‌ಪೇಟೆಯಲ್ಲಿ ವಾಸಿಸುತ್ತಿದ್ದಾರೆ. ನರಸಿಂಹ ಸೇರಿದಂತೆ ಇಡೀ ಕುಟುಂಬವು ಕೂಲಿ ಕೆಲಸಗಳನ್ನು ಮಾಡುವ ಮೂಲಕ ಜೀವನ ಸಾಗಿಸುತ್ತಿತ್ತು.ಬುಧವಾರ ರಾತ್ರಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆಯಲ್ಲಿ ನರಸಿಂಹ ಮತ್ತು ಅವರ ಪತ್ನಿ ವೆಂಕಟಮ್ಮ, ಅವರ ಎರಡನೇ ಮಗಳು ಮತ್ತು ಅಳಿಯ, ಮಗು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರೇ? ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸ್‌‍ ತನಿಖೆ ಮುಂದುವರೆದಿದೆ.ಒಂದೇ ಕುಟುಂಬದ ಐದು ಸದಸ್ಯರ ಸಾವು ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!