ಉದಯವಾಹಿನಿ, ಸಿರುಗುಪ್ಪ : ನಗರದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಸತತ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದು, ನಿತ್ಯವು ಈ ರಸ್ತೆಯಲ್ಲಿ ಸಾರ್ವಜನಿಕರು ವಾಹನಗಳೊಂದಿಗೆ ಸಂಚರಿಸಲು ಗೊಳಾಡುವ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನಲ್ಲಿ ಮಳೆ ಬಂದರೆ ಸಾಕು ಗುಂಡಿಗಳ ದರ್ಭರು ಮಳೆ ಬರದೇ ಹೋದರೆ ಧೂಳು ಕಾಟಕ್ಕೆ ತಾಲೂಕಿನ ಜನತೆ ದಿನೇ ದಿನೇ ಬೇಸೆತ್ತು ಹೋಗಿದ್ದಾರೆ. ಮದುವೆ, ಕಾರ್ಯಕ್ರಮ, ಕೆಲಸದ ಚಟುವಟಿಕೆಗಳಿಗೆ ಸಿರುಗುಪ್ಪ ನಗರಕ್ಕೆ ಬೇರೆ ಬೇರೆ ತಾಲೂಕು, ಜಿಲ್ಲೆಯಿಂದ ಆಗಮಿಸುವ ಜನರು ಸಿರುಗುಪ್ಪ ಎಂದರೆ ಸಾಕು ಧೂಳು ಅಥವಾ ಗುಂಡಿಗಳಿಂದ ಬೇಸತ್ತು ಹೋಗಿದ್ದಾರೆ.
ಗುರುವಾರ ಇಬ್ರಾಹಿಂಪುರ ಗ್ರಾಮದಲ್ಲಿ ಕೆಕೆಆರ್ ಟಿಸಿ ಬಸ್ ಗುಂಡಿಯಲ್ಲಿ ಸಿಕ್ಕು ಪ್ರಯಾಣಿಕರು ಪರದಾಡುವಂತಾಯಿತು.
ಅಲ್ಲದೇ ಸಿರುಗುಪ್ಪ ನಗರದ ಆಕ್ಸಿಸ್ ಬ್ಯಾಂಕ್ ಮುಂಭಾಗದಲ್ಲಿ ನೀರಿನ ಟ್ಯಾಂಕರ್ ಉರುಳಿಬಿದ್ದಿದೆ. ಇದರಿಂದಾಗಿ ತಾಸುಗಟ್ಟಲೆ ಸಮಚಾರ ವ್ಯತ್ಯಯಗೊಂಡಿತು.
ಹೆಸರಿಗಷ್ಟೇ ರಾಷ್ಟ್ರೀಯ ಹೆದ್ದಾರಿ ಆದರೆ ಇಲ್ಲಿನ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ನಿತ್ಯವೂ ಸಾರ್ವಜನಿಕರು ಪರಿತಪಿಸುವಂತಾಗಿದೆ.ನಗರದ ದೇವಲಾಪುರ ಕ್ರಾಸ್ ನಿಂದ ಧಡೇಸೂಗೂರು ವರೆಗಿನ ಕೇವಲ ಎಂಟು ಕಿಮೀ ಪ್ರಯಾಣಿಸಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದು ವಕೀಲ ಯು.ವೆಂಕೋಬ ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!