ಉದಯವಾಹಿನಿ, ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಸ್ಪಾರ್ಕ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ನಿರಂಜನ್ ಪತ್ರಕರ್ತನಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಒಂದು ಹಗರಣದ ಸುತ್ತ ಸಾಗುವ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸತ್ಯಕ್ಕಾಗಿ ನಿರಂಜನ್ ಹೋರಾಟ ಹೇಗಿದೆ ಅನ್ನೋದನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ನಿರಂಜನ್ ಸುಧೀಂದ್ರ, ಸ್ಪಾರ್ಕ್ ಎಲ್ಲರ ಮನಸ್ಸಿನಲ್ಲಿರುವ ಕಿಡಿ. ಏನೇ ಹಗರಣ, ಏನೇ ನಡೆದರು ಮೊದಲು ಧ್ವನಿ ಎತ್ತುವುದು ಪತ್ರಕರ್ತರು. ಅವರಿಗೆ ಸಿಗುವ ಗೌರವ ಹಾಗೂ ಗುರುತಿಸುವಿಗೆ ಮಿಸ್ ಆಗುತ್ತಿದೆ. ನಾನು ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ ನಿರ್ವಹಿಸುತ್ತಿದ್ದೇನೆ. ಇದು ದೊಡ್ಡ ಜವಾಬ್ದಾರಿ. ಇದರಲ್ಲಿ ಬರವಣಿಗೆ ತುಂಬಾ ಸ್ಟ್ರಾಂಗ್ ಆಗಿದೆ. ಇದು ಹಗರಣ ಕಥಾಹಂದರ ಹೊಂದಿರುವ ಚಿತ್ರ. ಕಮರ್ಷಿಯಲ್ ಆಗಿ ಈ ಸಿನಿಮಾ ಮೂಡಿಬಂದಿದೆ ಎಂದರು.
ನೆನಪಿರಲಿ ಪ್ರೇಮ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುರಸುಂದರಾಗ ಹೀರೋಗಳು ಇದ್ದಾರೆ. ಅದಕ್ಕೆ ಹೊಸ ಸೇರ್ಪಡೆ ನಿರಂಜನ್. ಗರಿಮ ಮೇಡಂ ಇರುವ ರೇಂಜ್ ಗೆ ಬೇರೆ ಯಾವುದೋ ಭಾಷೆ ಸಿನಿಮಾ ಮಾಡಬಹುದು. ಆದರೆ ನಿಮಗೆ ಕನ್ನಡದ ಮೇಲೆ ಇರುವ ಅಭಿಮಾನದಿಂದ ಕನ್ನಡ ಚಿತ್ರ ಮಾಡಿದ್ದೀರ. ಧನ್ಯವಾದ ನಿಮಗೆ. ನಾನು ಇಂಡಸ್ಟ್ರಿಗೆ ಮಾಸ್ ಹೀರೋ ಅಗಬೇಕು ಎಂದು ಬಂದೆ. ಆದರೆ ಬ್ಯಾಕ್ ಟು ಬ್ಯಾಕ್ ಲವ್ ಸ್ಟೋರಿ ಸಿನಿಮಾ ಮಾಡಿ ಅದು ಹಿಟ್ ಆಗಿ ನನ್ನ ಕ್ಲಾಸ್ ಹೀರೋ ಎಂದು ಪ್ರಿಂಟ್ ಹೊಡೆದು ಇಟ್ಟರು. ನನ್ನಲ್ಲಿರುವ ಸ್ಪಾರ್ಕ್ ನೋಡಿ ಮಹಾಂತೇಶ್ ನನಗೆ ಮಾಸ್ ಕ್ಯಾರೆಕ್ಟರ್ ಕೊಟ್ಟಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!