ಉದಯವಾಹಿನಿ, ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿದ ಪುಂಡನಿಗೆ ಪೊಲೀಸರು ದಂಡ ವಿಧಿಸಿ, ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ.ಆಗಸ್ಟ್‌ 15ರಂದು ಯುವಕ ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ಮಾಡಿದ್ದ. ಆತನ ಬೈಕ್‌ ಸ್ಟಂಟ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಗ್ರಾಮಾಂತರ ಠಾಣೆ ಪೊಲೀಸರು ಬೈಕ್‌ ಸವಾaರನನ್ನು ಪತ್ತೆ ಹಚ್ಚಿ, ಆತನಿಗೆ 5000 ರೂ. ದಂಡ ವಿಧಿಸಿದ್ದಾರೆ.
ಯುವಕ ವಿಡಿಯೋ ಮೂಲಕ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಇನ್ನುಮುಂದೆ ವ್ಹೀಲಿಂಗ್ ಮಾಡೋದಿಲ್ಲ. ಯಾರು ಈ ರೀತಿಯ ತಪ್ಪು ಮಾಡಬಾರದು ಎಂದು ಹೇಳಿದ್ದಾನೆ. ವ್ಹೀಲಿಂಗ್ ಮಾಡಿದ ಯುವಕನ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!