ಉದಯವಾಹಿನಿ, ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿನ ಮಳೆಯ ಅಬ್ಬರ ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 2 ಲಕ್ಷದ 52 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ದಾಖಲಾಗಿದೆ.
ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ಹರಿಯುತ್ತಿದ್ದು ಒಟ್ಟು 12 ಪ್ರಮುಖ ಸೇತುವೆಗಳ ಮುಳುಗಡೆ ಯಥಾಸ್ಥಿತಿ ಮುಂದುವರೆದಿದೆ‌. ಚಿಕ್ಕೋಡಿ ತಾಲೂಕಿನ ಕಲ್ಲೋಳ‌ ಗ್ರಾಮದ ನದಿ ತೀರದ ದತ್ತ ಮಂದಿರ ಸಂಪೂರ್ಣ ಜಲಾವೃತವಾಗಿದೆ ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತ ಹೈಅಲರ್ಟ ಜಾರಿ ಮಾಡಿದೆ. ಮತ್ತೆ ನೀರು ಹೆಚ್ಚಳವಾದಲ್ಲಿ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇನ್ನು 50 ಸಾವಿರ ಕ್ಯೂಸೆಕ್ ನೀರು ಹೆಚ್ಚಾದಲ್ಲಿ ಪ್ರವಾಹ ಸೃಷ್ಟಿ ಆಗುವ ಆತಂಕದಲ್ಲಿ ನದಿ ತೀರದ ಜನರಿದ್ದಾರೆ.
ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಈಗಾಗಲೇ ದೂದಗಂಗಾ ಹಾಗೂ ವೇದಗಂಗಾ ನದಿ ತೀರದ ಕಾರದಗಾ, ಹುನ್ನರಗಿ ಗ್ರಾಮಗಳು ಸೇರಿ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ತಮ್ಮ ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಗಳತ್ತ ತೆರಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!