ಉದಯವಾಹಿನಿ, ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆಯಾಗಿರುವ ತಮನ್ನಾ ಭಾಟಿಯಾಗೆ ಸರ್ಕಾರ 6.20 ಕೋಟಿ ರೂ. ಪಾವತಿಸಿದೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ತಯಾರಾಗುತ್ತಿರುವ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತಿಗೆ ಸರ್ಕಾರ ಖರ್ಚು ಮಾಡಲಾಗಿರುವ ಹಣವೆಷ್ಟು ಎಂದು ಚುಕ್ಕೆ ಗುರುತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯ ಜೊತೆಗೆ ಈ ಜಾಹೀರಾತಿಗಾಗಿ ಯಾವ ಯಾವ ರಾಯಭಾರಿಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರಿಗೆ ಇದುವರೆಗೂ ನೀಡಲಾಗಿರುವ ಸಂಭಾವನೆಯೆಷ್ಟು ಎಂದು ಪ್ರಶ್ನಿಸಿದ್ದರು. ಕಳೆದ 2 ವರ್ಷಗಳ ಅವಧಿಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪ್ರಚಾರಕ್ಕಾಗಿ 48,88,21,350 ರೂ. ವೆಚ್ಚ ಮಾಡಲಾಗಿದೆ. ದೇಶ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪುಚಾರಕ್ಕಾಗಿ ಸಂಸ್ಥೆಯು ರಾಯಭಾರಿಗಳನ್ನು ನೇಮಕ ಮಾಡಿದೆ.
