ಉದಯವಾಹಿನಿ, ಇದೊಂದು ಸುದ್ದಿಯ ನಿರೀಕ್ಷೆಯಲ್ಲಿತ್ತು ಕನ್ನಡ ಚಿತ್ರರಂಗ. ಅದುವೇ ಕನ್ನಡ ನಿರ್ದೇಶಕರ ಜೊತೆ ಹಿಂದಿ ಖ್ಯಾತ ನಟ ಅಜಯ್ ದೇವಗನ್ (Ajay Devgn) ಚಿತ್ರ ಮಾಡ್ತಾರೆ ಎನ್ನುವ ಸುದ್ದಿ ಬಹು ದಿನಗಳ ಹಿಂದಿನಿಂದಲೇ ಚಾಲ್ತಿಯಲ್ಲಿತ್ತು. ಇದೀಗ ನಿಜವಾಗಿದೆ. ಅಜಯ್ ದೇವಗನ್ ಕಥೆ ಹೇಳಿ ಮನಸ್ಸು ಗೆದ್ದ ನಿರ್ದೇಶಕ ಬೇರ‍್ಯಾರೂ ಅಲ್ಲ ಅವರೇ ಸು ಫ್ರಂ ಸೋ ನಿರ್ದೇಶಕ ಜೆಪಿ ತುಮಿನಾಡ್. ಚೊಚ್ಚಲ ಚಿತ್ರದಿಂದ ದೇಶಾದ್ಯಂತ ಹೆಸರು ಮಾಡಿರುವ ನಿರ್ದೇಶಕ ಜೆಪಿ ತುಮಿನಾಡ್ (JP Tuminad) ಮೊದಲ ಭೇಟಿಯಲ್ಲೇ ಕಥೆ ಒಪ್ಪಿಸಿ ಅಜಯ್ ದೇವಗನ್ ಡೇಟ್ಸ್ ಪಡೆದಿದ್ದಾರೆ. ಇದು ಮೂಲ ಕನ್ನಡ (Kannada) ಭಾಷೆಯ ಚಿತ್ರವಾಗಿದ್ದು ಐದು ಭಾಷೆಗಳಲ್ಲಿ ತಯಾರಾಗಲಿದೆ. ಅಂದಹಾಗೆ ಈ ಚಿತ್ರವನ್ನ ನಿರ್ಮಾಣ ಮಾಡ್ತಿರೋದು ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡದ ಕೆವಿಎನ್ ಫಿಲಂಸ್ ಎನ್ನಲಾಗುತ್ತಿದೆ.
ಮೊದಲ ಪ್ರಯತ್ನದಲ್ಲಿ ಸಿನಿಮಾ ಗೆಲ್ಲಿಸಿದ ನೂರು ಕೋಟಿ ಕ್ಲಬ್ ಲಿಸ್ಟ್ ಸೇರಿಸಿದ ನಿರ್ದೇಶಕ ಜೆಪಿ ತುಮಿನಾಡ್. ಅವರ ಚಿತ್ರವನ್ನ ನೋಡಿ ಮೆಚ್ಚಿ ತಮಗೊಂದು ಸಿನಿಮಾ ಕಥೆ ಹೇಳುವಂತೆ ಅಜಯ್ ದೇವಗನ್ ಆಹ್ವಾನ ನೀಡಿದ್ದರಂತೆ. ಜೆಪಿ ತುಮಿನಾಡ್ ಹೇಳಿರುವ ಹಾರರ್ ಕಥೆ ಅಜಯ್ ದೇವಗನ್‌ರ ಮನಸ್ಸು ಚೋರಿ ಮಾಡಿದೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *

error: Content is protected !!