ಉದಯವಾಹಿನಿ, ಮಾಸ್ಕೋ: ಉಕ್ರೇನ್‌ನಿಂದ ತನ್ನ ಅಣು ವಿದ್ಯುತ್ ಸ್ಥಾವರದ ಮೇಲೆ ಡೋನ್ ದಾಳಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಉಕ್ರೇನ್‌ನ 34ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ ವೇಳೆಯೇ ಈ ದಾಳಿ ನಡೆದಿದೆ.
ಉಕ್ರೇನ್ ಗಡಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಕುಸ್ಕ್i ಅಣು ವಿದ್ಯುತ್ ಸ್ಥಾವರದ ಮೇಲೆ ಮಧ್ಯರಾತ್ರಿಯ ವೇಳೆ ಈ ದಾಳಿ ನಡೆದಿದೆ. ಇದರಿಂದಾಗಿ ರಿಯಾಕ್ಟರ್-3ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲಾಗಿದೆ. ಘಟನೆಯಿಂದಾಗಿ ರಿಯಾಕ್ಟರ್-3ರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಶೇ.50ರಷ್ಟು ಇಳಿಸಲಾಗಿದ್ದು, ದುರಸ್ತಿ ನಡೆಸಲಾಗುತ್ತಿದೆ. ಘಟನೆಯಲ್ಲಿ ವಿಕಿರಣ ಸೋರಿಕೆಯಾಗಿಲ್ಲ. ಸಾವು-ನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ಲೆನಿನ್‌ಗಾAಡ್‌ನ ಬಂದರಿನಲ್ಲಿರುವ ಉಸ್ಟ್-ಲುಗಾ ಎಂಬ ರಷ್ಯಾದ ಪ್ರಮುಖ ಇಂಧನ ರಫ್ತು ಟರ್ಮಿನಲ್ ಹಾಗೂ ದಕ್ಷಿಣ ರಷ್ಯಾದ ಸಿಜ್ರಾನ್ ನಗರದ ಮೇಲೂ ದಾಳಿಯಾಗಿದೆ. ಈ ಪೈಕಿ ಸಿಜ್ರಾನ್‌ನಲ್ಲಿ ಒಂದು ಮಗುವಿಗೆ ಗಾಯವಾಗಿದೆ.
