ಉದಯವಾಹಿನಿ, ಬೀಜಿಂಗ್: ಚೀನಾದ ವುಹಾನ್‌ನಲ್ಲಿರುವ ಹೋಟೆಲ್‍ವೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದ್ದು, ಅದು ಶ್ವಾನಪ್ರಿಯರ ಹೃದಯಗಳನ್ನು ಗೆಲ್ಲುತ್ತಿದೆ. ಯಾಕೆಂದರೆ ಕಂಟ್ರಿ ಗಾರ್ಡನ್ ಫೀನಿಕ್ಸ್ ಎಂಬ ಹೋಟೆಲ್ ಈಗ ಕೇವಲ ಒಂದು ಕೋಣೆಯನ್ನು ನೀಡುವುದು ಮಾತ್ರವಲ್ಲದೆ ಉತ್ತಮ ತರಬೇತಿ ಪಡೆದ ನಾಯಿಯನ್ನೂ ನೀಡುತ್ತದೆ. ಈ ಹೋಟೆಲ್‍ನಲ್ಲಿ ಒಂದು ರಾತ್ರಿಗೆ ಸುಮಾರು 4,700 ರೂ.ಗಳಿಗೆದ್ದು, ಅತಿಥಿಗಳು ಗೋಲ್ಡನ್ ರಿಟ್ರೈವರ್‌, ಹಸ್ಕೀಸ್ ಅಥವಾ ವೆಸ್ಟ್ ಹೈಲ್ಯಾಂಡ್ ಟೆರಿಯರ್‌ಗಳಂತಹ ತಳಿಗಳೊಂದಿಗೆ ತಮ್ಮ ವಾಸ್ತವ್ಯವನ್ನು ಹಂಚಿಕೊಳ್ಳಬಹುದು. ಒಂಟಿತನ ಅಥವಾ ಯಾವುದೇ ರೀತಿಯ ಬೇಸರದಿಂದ ಹೊರಬರಲು ಉತ್ತಮವಾಗಿದೆ. ಇದೀಗ ಈ ವಿಚಾರ ಬಹಳ ವೈರಲ್‌(Viral News) ಆಗುತ್ತಿದೆ.

ಜುಲೈನಲ್ಲಿ ಪ್ರಾರಂಭವಾದ ಈ ಸೇವೆಯು ಈಗಾಗಲೇ 300ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಕಂಡಿದೆ. ಹೋಟೆಲ್ ವ್ಯವಸ್ಥಾಪಕ ಡಾಂಗ್ ಅವರ ಪ್ರಕಾರ, ಹೆಚ್ಚಿನ ಗ್ರಾಹಕರು ಈ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರಂತೆ. ಹೋಟೆಲ್‍ನ ಈ ಕ್ರಮವು ಬಹಳ ಲಾಭದಾಯಕವಾಗಿದೆ. 2024ರಲ್ಲಿ ನಗರ ಪ್ರದೇಶಗಳಲ್ಲಿ 300 ಬಿಲಿಯನ್ ಯುವಾನ್ ತಲುಪಿದ್ದರೆ, 2027 ರ ವೇಳೆಗೆ, ಇದು 400 ಬಿಲಿಯನ್ ಯುವಾನ್ ಅನ್ನು ತಲುಪುವ ನಿರೀಕ್ಷೆಯಿದೆ.

ಹೋಟೆಲ್‌ ಗ್ರಾಹಕರಿಗೆ ಶ್ವಾನಗಳ ಸೇವೆಯನ್ನು ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಗ್ರಾಹಕರೊಬ್ಬರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇಲ್ಲಿ ನಾಯಿಗಳು ಶಾಂತವಾಗಿ, ವಿಧೇಯ ಹಾಗೂ ಪ್ರೀತಿಯಿಂದ ವರ್ತಿಸುವುದನ್ನು ನೋಡಿ ಅಚ್ಚರಿಗೊಂಡಿದ್ದಾರಂತೆ. ಹೋಟೆಲ್ ಪ್ರಸ್ತುತ ರಿಟ್ರೈವರ್‌, ಹಸ್ಕೀಸ್ ಮತ್ತು ಟೆರಿಯರ್‌ ತಳಿಯ ಶ್ವಾನಗಳು ಸೇರಿದಂತೆ 10 ನಾಯಿಗಳನ್ನು ಹೊಂದಿದೆ. ಕೆಲವು ಶ್ವಾನಗಳು ಹೋಟೆಲ್‌ಗೆ ಸೇರಿದ್ದಾಗಿವೆ. ಇನ್ನು ಕೆಲವು ತರಬೇತುದಾರರು ಅಥವಾ ಖಾಸಗಿ ಮಾಲೀಕರದ್ದಾಗಿದೆ. ಅತಿಥಿಗಳು ಮತ್ತು ಪ್ರಾಣಿಗಳಿಗೆ ಸಕಾರಾತ್ಮಕ ಅನುಭವವನ್ನು ಪಡೆಯಲು ಎಲ್ಲಾ ಶ್ವಾನಗಳಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ನೀಡಲಾಗುತ್ತದೆ. ಅತಿಥಿಗಳಿಗೆ ಭಾವನಾತ್ಮಕ ಬೆಂಬಲ ಮತ್ತು ನಾಯಿಗಳಿಗೆ ಚಟುವಟಿಕೆಯನ್ನು ಒದಗಿಸುವುದು ಗುರಿಯಾಗಿದೆ.

Leave a Reply

Your email address will not be published. Required fields are marked *

error: Content is protected !!