ಉದಯವಾಹಿನಿ, ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ರಶ್ಮಿಕಾ ಮಂದಣ್ಣ ಬಿಡುವಿಲ್ಲದ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ಸಿನಿಮಾಗಳ ನಾಯಕಿಯಾಗುವುದರ ಜೊತೆ ಜೊತೆಗೆ ನಾಯಕಿ ಪ್ರಧಾನ ಸಿನಿಮಾಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಗರ್ಲ್‍ಫ್ರೆಂಡ್, ಮೈಸಾ, ಥಮಾ ಸಿನಿಮಾಗಳ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿ ಇರುವ ಹೊತ್ತಿಗೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಬಾಚಿಕೊಂಡ ಸುದ್ದಿ ಬಂದಿದೆ. ಅದುವೇ `ಕಾಂಚನ 4′ ದಕ್ಷಿಣ ಭಾರತದಲ್ಲಿ ಕಾಂಚನ ಸಿರೀಸ್ ಒಂದು ದಾಖಲೆ ಬರೆದ ಚಿತ್ರ ಸರಣಿ. ಪ್ರತಿ ಸರಣಿಯಲ್ಲೂ ರಾಘವ ಲಾರೆನ್ಸ್ ಕುತೂಹಲದ ಕಥೆ ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಈ ಸಲದ ಕಾಂಚನ ಸಿರೀಸ್‍ನ ನಾಯಕಿಯ ಆಫರ್ ರಶ್ಮಿಕಾಗೆ ಹೋಗಿದೆ ಎನ್ನಲಾಗುತ್ತಿದೆ. ರಶ್ಮಿಕಾ ಇಲ್ಲಿ ದೆವ್ವದ ಪಾತ್ರ ಮಾಡಲಿದ್ದಾರಂತೆ.
ಗ್ಲ್ಯಾಮರ್, ಪರ್ಫಾಮೆನ್ಸ್ ಎಲ್ಲದಕ್ಕೂ ಸೈ ಎನ್ನುವ ರಶ್ಮಿಕಾ ದಕ್ಷಿಣ ಭಾರತದ ಚಿತ್ರಕರ್ಮಿಗಳ ಆಯ್ಕೆಯ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಘೋಷಣೆಯಾಗಿರುವ ಚಿತ್ರಗಳು ಮೂರೇ ಆಗಿದ್ದರೂ ರಶ್ಮಿಕಾ ಕೈಯಲ್ಲಿ ಹತ್ತಾರು ಪ್ರಾಜೆಕ್ಟ್‌ಗಳಿವೆ. ಅದೆಲ್ಲವೂ ಕಾಲ ಬಂದಾಗ ಘೋಷಣೆಯಾಗುತ್ತೆ.
