ಉದಯವಾಹಿನಿ, ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸ್ಟೈಲ್‌ ಆಫ್ ಸಿನಿಮಾ ಮೇಕಿಂಗ್ ಎಲ್ಲರಿಗೂ ತಿಳಿದಿರುವುದೇ. ಇವರ ಸಿನಿಮಾ ಗ್ಲೋಬಲ್ ಲೆವೆಲ್ ಸೌಂಡ್ ಮಾಡುವ ಚಿತ್ರವಾಗಿದ್ದರೂ ಅವರು ಭಾರತದ ಭೂಪ್ರದೇಶ ಬಿಟ್ಟು ಚಿತ್ರೀಕರಣ ಮಾಡಿದವರಲ್ಲ. ಚಿತ್ರೀಕರಣಕ್ಕಾಗಿ ಸೆಟ್ ಬಳಸುವುದರ ಜೊತೆ ತಮ್ಮ ನೆಲದ ಸೊಗಡು ತೋರಿಸಬಹುದಾದ ಅತ್ಯದ್ಭುತ ಟೆಕ್ನಿಷಿಯನ್ ನೀಲ್. ಆದರೆ ಇದೀಗ ಮೊದಲ ಬಾರಿ ತಮ್ಮ ಸಿದ್ಧಸೂತ್ರ ಮುರಿಯಲು ಸಜ್ಜಾಗಿದ್ದಾರೆ ಪ್ರಶಾಂತ್ ನೀಲ್. ದೇಶ ಬಿಟ್ಟು ವಿದೇಶದಲ್ಲಿ ಚಿತ್ರೀಕರಣ ಮಾಡಲು ತಯಾರಾಗಿದ್ದಾರಂತೆ ಕೆಜಿಎಫ್ ಸಾರಥಿ.
ಸ್ಟಾರ್ ಕಲಾವಿದರ ಜೊತೆಯಾಗಿ ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿದರೂ ಚಿತ್ರೀಕರಣಕ್ಕಾಗಿ ಗಡಿದಾಟದ ಈಗಿನ ಕಾಲದ ಡೈರೆಕ್ಟರ್ ಅಂದ್ರೆ ಅವರು ಪ್ರಶಾಂತ್ ನೀಲ್. ಇದೀಗ ಚಿತ್ರೀಕರಣವಾಗ್ತಿರೋ ಡ್ರ್ಯಾಗನ್‌ ಸಿನಿಮಾದಲ್ಲೂ ಇದೇ ಸೂತ್ರ ಅನುಸರಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೀಗ ಮುಂದಿನ ಶೆಡ್ಯೂಲ್‌ನಲ್ಲಿ ನೀಲ್ ತಂಡದ ಜೊತೆ ವಿದೇಶಕ್ಕೆ ಹೊರಟಿದ್ದಾರೆ. ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಡ್ರ್ಯಾಗನ್‌ (Dragon) ಚಿತ್ರದ ಮೂರನೇ ಶೆಡ್ಯೂಲ್ ಶೂಟಿಂಗ್ ವಿದೇಶದಲ್ಲಿ ನಡೆಯಲಿರುವುದು ವಿಶೇಷ.
ಗೆಳೆಯ ಹಾಗೂ ಅವರ ಸಿನಿಮಾ ನಾಯಕ ಜೂ.ಎನ್‌ಟಿಆರ್ (Jr NTR) ಜೊತೆಗೂಡಿ ವಿದೇಶಕ್ಕೆ ತೆರಳಿ ಹಲವು ದಿನ ಚಿತ್ರೀಕರಣ ಮುಗಿಸಿ ವಾಪಸ್ಸಾಗಲಿದೆಯಂತೆ ಟೀಮ್. ಸ್ರ್ಕಿಪ್ಟ್‌ ಬಯಸಿದ್ದರಿಂದ ನೀಲ್ ಈ ಬಾರಿ ತಮ್ಮ ಇದುವರೆಗಿನ ಟ್ರೆಂಡ್‌ನ್ನ ಬ್ರೇಕ್ ಮಾಡಲು ಮುಂದಾಗಿದ್ದಾರಂತೆ.

Leave a Reply

Your email address will not be published. Required fields are marked *

error: Content is protected !!